Home ಕರಾವಳಿ ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣ; ಸಿಒಡಿ ತನಿಖೆಯಿಂದ ನ್ಯಾಯ ನಿರೀಕ್ಷಿಸುವಂತಿಲ್ಲ: ಯುಟಿ ಖಾದರ್

ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣ; ಸಿಒಡಿ ತನಿಖೆಯಿಂದ ನ್ಯಾಯ ನಿರೀಕ್ಷಿಸುವಂತಿಲ್ಲ: ಯುಟಿ ಖಾದರ್

ಮಂಗಳೂರು: ಕೋಟತಟ್ಟು ಕೊರಗರ ಮೇಲಿನ ಪೊಲೀಸರ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸಿಒಡಿ ತನಿಖೆಗೆ ನೀಡಲಾಗಿದ್ದು, ಇದರಿಂದ ನ್ಯಾಯ ನಿರೀಕ್ಷಿಸುವಂತಿಲ್ಲ ಎಂದು ಶಾಸಕ ಯು.ಟಿ ಖಾದರ್ ಹೇಳಿದ್ದಾರೆ.

ಈ ಕುರಿತು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರಗರ ಮೇಲಿನ ಪೊಲೀಸರ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸಿಒಡಿ ತನಿಖೆಗೆ ನೀಡಲಾಗಿದ್ದು, ಇದರಿಂದ ನ್ಯಾಯ ನಿರೀಕ್ಷಿಸುವಂತಿಲ್ಲ. ಹಾಲಿ ಇಲ್ಲವೇ ನಿವೃತ್ತ ಜಿಲ್ಲಾ ನ್ಯಾಯಾಧೀಶರಿಂದ ತನಿಖೆ ನಡೆಸಿ ಎಂದು ಒತ್ತಾಯಸಿದ್ದಾರೆ.

ಸಿಒಡಿ ತನಿಖೆ ಅನ್ನೋದು ಕಣ್ಣೊರೆಸುವ ತಂತ್ರವಾಗಿದ್ದು,ಇದು ಜನರನ್ನು ಮೂರ್ಖರನ್ನಾಗಿಸುವ ಕೆಲಸವಾಗಿದೆ.  ಪೊಲೀಸರ ದೌರ್ಜನ್ಯವನ್ನು ಪೊಲೀಸರಿಂದ ತನಿಖೆ ನಡೆಸಿದರೆ ನ್ಯಾಯ ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಸಚಿವರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಗೃಹ ಸಚಿವರೇ ಪೊಲೀಸರಿಂದ ತಪ್ಪಾಗಿದೆ ಎನ್ನುತ್ತಿದ್ದಾರೆ. ಇವರದ್ದೇ ಇಲಾಖೆ ಇವರೇ ತಪ್ಪಾಗಿದೆ ಎನ್ನುತ್ತಿದ್ದಾರೆ. ತಪ್ಪಾಗಿದ್ದಕ್ಕೆ ಏನು ಪರಿಹಾರ ಕೊಡುತ್ತೀರಿ ಅದನ್ನು ಹೇಳಲಿ. ಇದೇ ಘಟನೆ ಬೇರೆ ಜಿಲ್ಲೆಯಲ್ಲಿ ಆಗುತ್ತಿದ್ದರೆ ಸರಕಾರದ ಪರಿಸ್ಥಿತಿ ಏನಾಗ್ತಿತ್ತು ಒಮ್ಮೆ ಯೋಚನೆ ಮಾಡಲಿ ಎಂದು ಗುಡುಗಿದರು.

Join Whatsapp
Exit mobile version