Home ಟಾಪ್ ಸುದ್ದಿಗಳು ಹಣ ಕೊಟ್ಟು ಗ್ಯಾಂಗ್ ರೇಪ್ ಕೇಸ್ ಹಿಂಪಡೆಯಲು ಹೇಳಿದ್ದ ಪೊಲೀಸರು: ಬೊಮ್ಮಾಯಿ ಗಂಭೀರ ಆರೋಪ

ಹಣ ಕೊಟ್ಟು ಗ್ಯಾಂಗ್ ರೇಪ್ ಕೇಸ್ ಹಿಂಪಡೆಯಲು ಹೇಳಿದ್ದ ಪೊಲೀಸರು: ಬೊಮ್ಮಾಯಿ ಗಂಭೀರ ಆರೋಪ

ಹಾವೇರಿ: ಹಾನಗಲ್ ನಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್ ಪ್ರಕರಣವನ್ನು ಮುಚ್ಚಿ ಹಾಕಲು ಪೊಲೀಸರು ಸಂತ್ರಸ್ತೆಗೆ ಹಣ ಕೊಟ್ಟು ಯತ್ನಿಸಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಗಂಭೀರವಾಗಿ ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಮಾಜಿ ಸಿಎಂ, ಹಣ ಕೊಟ್ಟರೂ ಸಾಮೂಹಿಕ ಅತ್ಯಾಚಾರ ಪ್ರಕರಣ ಮುಚ್ಚಿ ಹಾಕುವ ಪೊಲೀಸರ ಯತ್ನ ವಿಫಲವಾಗಿದೆ ಎಂದಿದ್ದಾರೆ.

ಸಂತ್ರಸ್ತೆಗೆ ಹಣ ಕೊಟ್ಟು ಪ್ರಕರಣವನ್ನು ಹಿಂಪಡೆಯುವಂತೆ ಹೇಳಿದ್ದರು. ಈ ವಿಚಾರ ಇದೀಗ ಬಹಿರಂಗವಾಗಿದೆ. ಸ್ಥಳೀಯ ಪೊಲೀಸರು ಪ್ರಕರಣ ಮುಚ್ಚಿ ಹಾಕುವ ಯತ್ನ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಪ್ರಕರಣದ ತನಿಖೆಯನ್ನು ಎಸ್ ಐಟಿಗೆ ಕೊಡಬೇಕು. ತನಿಖೆ ನೆಪದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಪೊಲೀಸರಿಂದ ನಾವೇನೂ ನಿರೀಕ್ಷೆ ಮಾಡಲು ಆಗಲ್ಲ ಎಂದು ಮಾಜಿ ಸಿಎಂ ಹೇಳಿದರು.

Join Whatsapp
Exit mobile version