Home ಟಾಪ್ ಸುದ್ದಿಗಳು ಮಗು ಅಪಹರಿಸಿ ಮಾರಾಟ: ಆರೋಪಿ ಸೆರೆ

ಮಗು ಅಪಹರಿಸಿ ಮಾರಾಟ: ಆರೋಪಿ ಸೆರೆ

ಬೆಂಗಳೂರು: ಮಗು ಅಪಹರಣ ಮಾಡಿ ಮಾರಾಟ ಮಾಡಿದ್ದ ಆರೋಪಿಯನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಕಾರ್ತಿಕ್ (24) ಬಂಧಿತ ಆರೋಪಿಯಾಗಿದ್ದಾನೆ ಎಂದು ಡಿಸಿಪಿ ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ.


ಆರೋಪಿ ಕಾರ್ತಿಕ್ ಕಳೆದ ವರ್ಷ ಬ್ಯಾಟರಾಯನಪುರದ ಶಾಮಣ್ಣ ಗಾರ್ಡನ್ ಸಮೀಪದಲ್ಲಿ ಪರಿಚಿತರ ಮಗುವನ್ನೇ ಅಪಹರಣ ಮಾಡಿ ಹೊಸೂರು ಬಳಿಯ ಯಮರೆ ಗ್ರಾಮದ ನಿವಾಸಿಗೆ 60 ಸಾವಿರ ರೂಪಾಯಿಗೆ ಮಾರಾಟ ಮಾಡಿದ್ದ.


ಘಟನೆ ಸಂಬಂಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಕಳೆದ ಒಂದು ವರ್ಷದಿಂದ ಆರೋಪಿ ಮೇಲೆ ನಿಗಾ ಇಟ್ಟಿದ್ದ ಪೊಲೀಸರು, ಇತ್ತೀಚಿಗೆ ಮಗು ಮಾರಾಟ ಸುಳಿವು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ. ಸದ್ಯ ಮಗುವನ್ನು ಸಿಡಬ್ಲ್ಯೂಸಿನಲ್ಲಿ ಇರಿಸಲಾಗಿದ್ದು, ಕಾನೂನು ಪ್ರಕ್ರಿಯೆ ಬಳಿಕ ಪೊಲೀಸರು ಪೋಷಕರ ಮಡಿಲಿಗೆ ಒಪ್ಪಿಸಲಿದ್ದಾರೆ.

Join Whatsapp
Exit mobile version