Home ಟಾಪ್ ಸುದ್ದಿಗಳು ಖ್ಯಾತ ಕವಯತ್ರಿ, ಮಹಿಳಾ ಹೋರಾಟಗಾರ್ತಿ ಕಮಲ ಭಾಸಿನ್ ನಿಧನ

ಖ್ಯಾತ ಕವಯತ್ರಿ, ಮಹಿಳಾ ಹೋರಾಟಗಾರ್ತಿ ಕಮಲ ಭಾಸಿನ್ ನಿಧನ

ನವದೆಹಲಿ: ಖ್ಯಾತ ಕವಯತ್ರಿ, ಮಹಿಳಾ ಹೋರಾಟಗಾರ್ತಿ ಕಮಲಾ ಭಾಸಿನ್ ಅವರು ಇಂದು ತನ್ನ 75ನೇ ವಯಸ್ಸಿನಲ್ಲಿ ನಿಧನರಾದರು ಎಂದು ಮಾಧ್ಯಮ ವರದಿ ಮಾಡಿದೆ. ಅವರು ಕೆಲವು ಸಮಯದಿಂದ ಕ್ಯಾನರ್ ನಿಂದ ಬಳಲುತ್ತಿದ್ದರು.

ಕಮಲ ಭಾಸಿನ್ ಅವರು 1946 ರಲ್ಲಿ ಈಗಿನ ಪಾಕಿಸ್ತಾನದ ಮಂಡಿ ಬಹಾವುದ್ದೀನ್ ಜಿಲ್ಲೆಯಲ್ಲಿ ಜನಿಸಿದರು. ಭಾರತ ವಿಭಜನೆಯ ನಂತರ ಅವರ ಕುಟುಂಬ ಭಾರತದ ರಾಜಸ್ತಾನದ ಸ್ಥಳಾಂತರಗೊಂಡಿತು. ರಾಜಸ್ತಾನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪೂರ್ತಿಗೊಳಿಸಿದರು. ಮಾತ್ರವಲ್ಲ ಜರ್ಮನಿಯ ಮನ್ಸ್ಟರ್ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗದಲ್ಲಿ ಉನ್ನತ ವ್ಯಾಸಂಗವನ್ನು ನಿರ್ವಹಿಸಿದರು.

ಉನ್ನತ ಶಿಕ್ಷಣವನ್ನು ಪೂರ್ತಿಗೊಳಿಸಿದ ನಂತರ ಭಾರತಕ್ಕೆ ಮರಳಿದ ಅವರು ಉದಯಪುರ ಮೂಲದ ಸರಕಾರಿಯೇತರ ಸೇವಾ ಮಂದಿರದಲ್ಲಿ ಕಾರ್ಯ ನಿರ್ವಹಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿದ ಅವರು ಮಹಿಳೆಯರ ಪರ ನಿರಂತರ ಧ್ವನಿ ಎತ್ತಿದರು.

2002 ರಲ್ಲಿ ದಕ್ಷಿಣ ಏಷ್ಯಾದ ಸ್ತ್ರೀವಾದಿ ಜಾಲವನ್ನು ಸ್ಥಾಪಿಸಿದ ಅವರು ಗ್ರಾಮೀಣ ಮತ್ತು ಬುಡಕಟ್ಟು ಸಮುದಾಯದ ಹಿಂದುಳಿದ ಮಹಿಳೆಯರೊಂದಿಗೆ ಕಾರ್ಯ ನಿರ್ವಹಿಸಿದರು. ಮಹಿಳೆಯರ ಸಬಲೀಕರಣಕ್ಕಾಗಿ ಜಾಗೋರಿಯ ಎಂಬ ಪ್ರಗತಿಪರ ಸಂಘಟನೆಯನ್ನು ಸ್ಥಾಪಿಸಿ ಮಹಿಳಾ ವಿರೋಧಿ ಧೋರಣೆಯ ವಿರುದ್ಧ ನಿರಂತರ ಹೋರಾಟ ನಡೆಸಿದರು.

ಖ್ಯಾತ ಕವಯತ್ರಿ, ಮಹಿಳಾ ಹೋರಾಟಗಾರ್ತಿ ಕಮಲ ಭಾಸಿನ್ ಅವರ ನಿಧನಕ್ಕೆ ರಾಷ್ಟ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

Join Whatsapp
Exit mobile version