Home ಟಾಪ್ ಸುದ್ದಿಗಳು POCSO, ಸಮ್ಮತಿಯ ದೈಹಿಕ ಸಂಬಂಧವನ್ನು ಅಪರಾಧವೆಂಬಂತೆ ಬಿಂಬಿಸುವ ಉದ್ದೇಶ ಹೊಂದಿಲ್ಲ: ದೆಹಲಿ ಹೈಕೋರ್ಟ್

POCSO, ಸಮ್ಮತಿಯ ದೈಹಿಕ ಸಂಬಂಧವನ್ನು ಅಪರಾಧವೆಂಬಂತೆ ಬಿಂಬಿಸುವ ಉದ್ದೇಶ ಹೊಂದಿಲ್ಲ: ದೆಹಲಿ ಹೈಕೋರ್ಟ್

ನವದೆಹಲಿ: POCSO ಕಾಯ್ದೆಯ ಹಿಂದಿನ ಉದ್ದೇಶ ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸುವುದೇ ಹೊರತು ಯುವ ಸಮೂಹದ ನಡುವಿನ ಸಮ್ಮತಿಯ ದೈಹಿಕ ಸಂಬಂಧವನ್ನು ಅಪರಾಧೀಕರಣಗೊಳಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ದೆಹಲಿ ಹೈಕೋರ್ಟ್ ತಿಳಿಸಿದೆ.

ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ಸಂತ್ರಸ್ತರು ಒತ್ತಡವನ್ನು ಎದುರಿಸಬೇಕಾಗಿರುವುದರಿಂದ ಸಂಬಂಧದ ಸ್ವರೂಪವನ್ನು ಪ್ರತಿಯೊಂದು ಪ್ರಕರಣದ ಸಂಗತಿಗಳು ಮತ್ತು ಸಂದರ್ಭದಲ್ಲಿ ನೋಡಬೇಕು ಎಂದು ನ್ಯಾಯಾಲಯ ಎಚ್ಚರಿಸಿದೆ.

17 ವರ್ಷದ ಬಾಲಕಿಯನ್ನು ಮದುವೆಯಾದ ಯುವಕನಿಗೆ ಜಾಮೀನು ನೀಡುವಾಗ ನ್ಯಾಯಾಲಯದ ವೀಕ್ಷಣೆಗೆ ಬಂದಿತ್ತು ಮತ್ತು ಪೋಕ್ಸೋ ಕಾಯ್ದೆ ಅಡಿಯಲ್ಲಿ ಆತನನ್ನು ಬಂಧಿಸಲಾಯಿತು.

ಸದ್ಯ ಈ ಪ್ರಕರಣದಲ್ಲಿ ಯುವಕನೊಂದಿಗಿನ ಸಂಬಂಧಕ್ಕೆ ಬಾಲಕಿಯನ್ನು ಬಲವಂತಪಡಿಸಲಾಗಿಲ್ಲ ಎಂದು ನ್ಯಾಯಾಲಯ ಗಮನಿಸಿದೆ ಮತ್ತು ಇಬ್ಬರ ನಡುವೆ ಒಮ್ಮತದಿಂದ ದೈಹಿಕ ಸಂಬಂಧ ಬೆಳೆದಿತ್ತು ಎಂಬುದು ನ್ಯಾಯಾಲಯಕ್ಕೆ ಮನವರಿಕೆಯಾಗಿದೆ.

ನನ್ನ ಅಭಿಪ್ರಾಯದಲ್ಲಿ ಪೋಕ್ಸೋ ಕಾಯ್ದೆಯ ಉದ್ದೇಶ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಲೈಂಗಿಕ ಶೋಷಣೆಯಿಂದ ರಕ್ಷಿಸುವುದಾಗಿದ್ದು, ಯುವ ಸಮೂಹದ ನಡುವಿನ ಒಮ್ಮತದ ದೈಹಿಕ ಸಂಬಂಧವನ್ನು ಅಪರಾಧೀಕರಣಗೊಳಿಸುವ ಯಾವ ಉದ್ದೇಶವನ್ನು ಹೊಂದಿಲ್ಲ ಎಂದು ದೆಹಲಿ ಹೈಕೋರ್ಟ್’ನ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರು ತನ್ನ ಆದೇಶದಲ್ಲಿ ತಿಳಿಸಿದ್ದಾರೆ.

ವೈಯಕ್ತಿಕ ಬಾಂಡ್ ಮತ್ತು ತಲಾ 10,000 ರೂ.ಗಳ ಶ್ಯೂರಿಟಿ ಬಾಂಡ್ ಮೇಲೆ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಸೂಚಿಸಿದೆ.

ಆರೋಪಿ ತನಿಖೆಗೆ ಹಾಜರಾಗುವಂತೆಯೂ, ಪಾಸ್‌ಪೋರ್ಟ್ ಒಪ್ಪಿಸುವಂತೆ ಮತ್ತು ಯಾವುದೇ ಅಪರಾಧ ಚಟುವಟಿಕೆಯಲ್ಲಿ ಪಾಲ್ಗೊಳ್ಳದಂತೆಯೂ ನ್ಯಾಯಾಲಯ ಸೂಚಿಸಿದೆ.

Join Whatsapp
Exit mobile version