Home ಟಾಪ್ ಸುದ್ದಿಗಳು ಮುರುಘಾ ಸ್ವಾಮಿಯ ವಿರುದ್ಧ ಪೋಕ್ಸೋ ಪ್ರಕರಣ ಹಿನ್ನೆಲೆ; ಒಡನಾಡಿ ಸಂಸ್ಥೆ ಸಿಬ್ಬಂದಿಗೆ ಕೊಲೆ ಬೆದರಿಕೆ

ಮುರುಘಾ ಸ್ವಾಮಿಯ ವಿರುದ್ಧ ಪೋಕ್ಸೋ ಪ್ರಕರಣ ಹಿನ್ನೆಲೆ; ಒಡನಾಡಿ ಸಂಸ್ಥೆ ಸಿಬ್ಬಂದಿಗೆ ಕೊಲೆ ಬೆದರಿಕೆ

ಮೈಸೂರುಮುರುಘಾ ಮಠದ ಶಿವಮೂರ್ತಿ ಸ್ವಾಮಿಯ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಲು ಕಾರಣವಾಗಿರುವ ಮೈಸೂರಿನ ಸ್ವಯಂಸೇವಾ ಸಂಸ್ಥೆ ಒಡನಾಡಿ ಸಿಬ್ಬಂದಿಗೆ ಕೊಲೆ ಬೆದರಿಕೆ ಕರೆ ಬಂದಿದ್ದು ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ.‌

ಪ್ರಕರಣದಿಂದ ಹಿಂದೆ ಸರಿಯಬೇಕು, ಇಲ್ಲದಿದ್ದರೆ ಎಲ್ಲರನ್ನೂ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ತಮಗೆ  ಪೊಲೀಸ್ ರಕ್ಷಣೆ ನೀಡುವಂತೆ ಒಡನಾಡಿ ಸಂಸ್ಥೆಯ ಸ್ಟಾನ್ಲಿ, ಪರಶು ಹಾಗೂ ಸಿಬ್ಬಂದಿ ಎಂದು ಮೈಸೂರು ಪೊಲೀಸ್ ಆಯುಕ್ತ ಆಯುಕ್ತ ಚಂದ್ರಗುಪ್ತ ಅವರಿಗೆ ಪತ್ರ ಬರೆದಿದ್ದಾರೆ. ‌

ಒಡನಾಡಿ ಸೇವಾ ಸಂಸ್ಥೆ ಸರ್ಕಾರೇತರ ಸಾಮಾಜಿಕ ಸೇವಾ ಕಾರ್ಯ ನಡೆಸುತ್ತಿರುವ ಸಂಸ್ಥೆಯಾಗಿದ್ದು ಮೈಸೂರಿನ ಇಲವಾಲ ಹೋಬಳಿಯ ಬೋಗಾದಿ ಎಂಬಲ್ಲಿ ಕಚೇರಿ ಹೊಂದಿದೆ. ಲೈಂಗಿಕವಾಗಿ ಶೋಷಿಸಲ್ಪಟ್ಟ ಮಕ್ಕಳು ಮತ್ತು ಮಹಿಳೆಯರನ್ನು ರಕ್ಷಿಸುವುದು, ಅವರಿಗೆ ಪುನರ್ವಸತಿ ಕಲ್ಪಿಸುವುದು, ಮಹಿಳೆಯರ ಸಬಲೀಕರಣ ಇತ್ಯಾದಿ ಸೇವಾ ಕಾರ್ಯಗಳನ್ನು ಈ ಸಂಸ್ಥೆ ಮಾಡುತ್ತಿದೆ. 1989ರಲ್ಲಿ ಕೆ. ವಿ. ಸ್ಟಾನ್ಲಿ ಮತ್ತು ಎಂ.ಎಲ್. ಪರಶುರಾಮ ಸಂಸ್ಥೆ ಆರಂಭಿಸಿದ್ದು 1992ರಲ್ಲಿ ಅಧಿಕೃತ ಸಂಸ್ಥೆಯಾಗಿ ನೋಂದಣಿಯಾಗಿದೆ.

Join Whatsapp
Exit mobile version