Home ಟಾಪ್ ಸುದ್ದಿಗಳು ‘ಬಂಗಾಳ ಚುನಾವಣೆಯ ವೇಳೆ ಗಡ್ಡ, ತಮಿಳುನಾಡು ಚುನಾವಣೆಯಲ್ಲಿ ಲುಂಗಿ’; ಪ್ರಧಾನಿ ಮೋದಿ ಕುರಿತು ತೆಲಂಗಾಣ ಮುಖ್ಯಮಂತ್ರಿ...

‘ಬಂಗಾಳ ಚುನಾವಣೆಯ ವೇಳೆ ಗಡ್ಡ, ತಮಿಳುನಾಡು ಚುನಾವಣೆಯಲ್ಲಿ ಲುಂಗಿ’; ಪ್ರಧಾನಿ ಮೋದಿ ಕುರಿತು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಲೇವಡಿ !

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿಯವರು ಯಾವ ರಾಜ್ಯದಲ್ಲಿ ಚುನಾವಣೆ ನಡೆಯುತ್ತದೆಯೋ, ಆ ರಾಜ್ಯಕ್ಕೆ ತಕ್ಕಂತೆ ವೇಷಭೂಷಣಗಳನ್ನು ಬದಲಾಯಿಸುತ್ತಾರೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಟೀಕಿಸಿದ್ದಾರೆ.
“ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಅವರು ಗಡ್ಡ ಬೆಳೆಸುತ್ತಾರೆ, ತಮಿಳುನಾಡಿನಲ್ಲಾದರೆ ಅವರು ಕಡ್ಡಾಯವಾಗಿ ಲುಂಗಿ ಧರಿಸುತ್ತಾರೆ. ಪಂಜಾಬ್ ರಾಜ್ಯದ ಚುನಾವಣೆ ವೇಳೆ ಪಗ್ಡಿ ಧರಿಸುತ್ತಾರೆ ಎಂದು ಪ್ರಧಾನಿ ಮೋದಿಯ ಕಾಲೆಳೆದಿದ್ದಾರೆ.

https://twitter.com/Ashi_IndiaToday/status/1488704386687635459?s=20&t=OotWIKjEJR4jI4h7UDjOaQ

ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟ್‌ ಅನ್ನು ಟೀಕಿಸಿರುವ ಸಿಎಂ ಕೆಸಿಆರ್, ‘ಈ ಬಾರಿಯ ಬಜೆಟ್‌ ಗುಜರಾತ್ ಮಾಡೆಲ್ ಪ್ರಚಾರವಿದ್ದಂತೆ. ಮೇಲ್ನೋಟಕ್ಕೆ ಶೆರ್ವಾನಿ ಒಳಗೆ ಪರೆಶಾನಿ [ ಸಮಸ್ಯೆ] ಎಂಬುದಾಗಿದೆ’ ಎಂದು ತೆಲಂಗಾಣ ಸಿಎಂ ಕೆಸಿಆರ್ ಲೇವಡಿ ಮಾಡಿದ್ದಾರೆ.

ತೆಲಂಗಾಣ ಮುಖ್ಯಮಂತ್ರಿ ಹೇಳಿಕೆ ಮಹತ್ವ ಪಡೆದಿದ್ದೇಕೆ ?

ಹೈದರಾಬಾದ್’ನ ಹೊರವಲಯದಲ್ಲಿ ಒಂದು ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಜಗತ್ತಿನ ಎರಡನೇ ಅತಿದೊಡ್ಡ ಪ್ರತಿಮೆ ಎಂಬ ಖ್ಯಾತಿಗೆ ಪಾತ್ರವಾಗಿರುವ ಸಂತ ರಾಮಾನುಜಾಚಾರ್ಯ ಅವರ ಪ್ರತಿಮೆ ಅನಾವರಣಗೊಳಿಸಲು ಮುಂದಿನ ಶನಿವಾರ ಪ್ರಧಾನಿ ಮೋದಿ ಹಾಗೂ ಸಿಎಂ ಚಂದ್ರಶೇಖರ್ ರಾವ್ ಹೆಲಿಕಾಪ್ಟರ್’ನಲ್ಲಿ ಜೊತೆಯಾಗಿ ಪ್ರಯಾಣ ಬೆಳೆಸಲಿರುವ ಕಾರ್ಯಕ್ರಮ ನಿಗದಿಯಾಗಿದೆ. ಪ್ರಧಾನಿ -ಸಿಎಂ ಭೇಟಿಗೆ ಒಂದೆರಡು ದಿನಗಳಷ್ಟೇ ಬಾಕಿ ಇರುವ ಬೆನ್ನಲ್ಲೇ ಚಂದ್ರಶೇಖರ್ ರಾವ್ ಅವರ ಹೇಳಿಕೆ ಭಾರಿ ಮಹತ್ವ ಪಡೆದುಕೊಂಡದೆ.

Join Whatsapp
Exit mobile version