Home ಟಾಪ್ ಸುದ್ದಿಗಳು ಪ್ರಧಾನಿ ಮೋದಿ ವೆಬ್ ಸೈಟ್ ಟ್ವಿಟರ್ ಖಾತೆಗೆ ಹ್ಯಾಕರ್ ಗಳ ಕನ್ನ | ಕ್ರಿಪ್ಟೊ ಕರೆನ್ಸಿ...

ಪ್ರಧಾನಿ ಮೋದಿ ವೆಬ್ ಸೈಟ್ ಟ್ವಿಟರ್ ಖಾತೆಗೆ ಹ್ಯಾಕರ್ ಗಳ ಕನ್ನ | ಕ್ರಿಪ್ಟೊ ಕರೆನ್ಸಿ ಮೂಲಕ ದೇಣಿಗೆ ನೀಡಲು ಮನವಿ


ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್ ಸೈಟ್ ಗೆ ಲಿಂಕ್ ಆಗಿರುವ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ಈ ಬಗ್ಗೆ ಟ್ವಿಟರ್ ಇಂದು ಖಚಿತಪಡಿಸಿದೆ. ಪ್ರಧಾನಿ ಮೋದಿ ಅವರ ವೆಬ್ ಸೈಟ್ ಖಾತೆಯಿಂದ, ಪರಿಹಾರ ನಿಧಿಗೆ ಕ್ರಿಪ್ಟೊ ಕರೆನ್ಸಿಗಳ ಮೂಲಕ ಸಹಾಯ ಮಾಡಿ ಎಂದು ಸರಣಿ ಟ್ವೀಟ್ ಗಳಲ್ಲಿ ಮನವಿ ಮಾಡಲಾಗಿತ್ತು.

ಪ್ರಧಾನಿಯವರ ಟ್ವಿಟರ್ ಖಾತೆ ಹ್ಯಾಕ್ ಆಗಿರುವುದನ್ನು ದೃಢ ಪಡಿಸಿರುವ ಟ್ವಿಟರ್, ಈ ಕುರಿತ ಚಟುವಟಿಕೆಗಳ ಬಗ್ಗೆ ಗಮನವಿದ್ದು, ಅದನ್ನು ಸುರಕ್ಷಿತಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
‘’ಪರಿಸ್ಥಿತಿಯ ಬಗ್ಗೆ ಸಕ್ರಿಯ ತನಿಖೆ ನಡೆಸುತ್ತಿದ್ದೇವೆ. ಇದರ ಪರಿಣಾಮಕ್ಕೆ ಇತರೆ ಅಕೌಂಟ್ ಗಳು ಒಳಗಾಗಿವೆಯೇ ಎಂಬ ಬಗ್ಗೆ ಪ್ರಸ್ತುತ ನಮ್ಮ ಗಮನಕ್ಕೆ ಬಂದಿಲ್ಲ’’ ಎಂದು ಟ್ವಿಟರ್ ವಕ್ತಾರರು ತಿಳಿಸಿರುವುದಾಗಿ ‘ರಾಯಿಟರ್ಸ್’ ವರದಿ ಮಾಡಿದೆ.

ಮೋದಿಯವರ ಈ ಖಾತೆಯನ್ನು 25 ಲಕ್ಷ ಮಂದಿ ಫಾಲೊ ಮಾಡುತ್ತಿದ್ದಾರೆ. ಮೋದಿ ಅವರ ವೈಯಕ್ತಿಕ ಟ್ವಿಟರ್ ಖಾತೆಯ ಮೇಲೆ ಯಾವುದೇ ಪರಿಣಾಮ ಉಂಟಾಗಿಲ್ಲ. ಕೋವಿಡ್ 19 ಹೋರಾಟಕ್ಕಾಗಿ ಪ್ರಧಾನಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ ಬಿಟ್ ಕಾಯಿನ್ ಮೂಲಕ ಧನ ಸಹಾಯ ಮಾಡಿ. ಭಾರತ ಈಗ ಕ್ರಿಪ್ಟೊ ಕರೆನ್ಸಿಗಳನ್ನು ಬಳಸುತ್ತಿದೆ ಎಂದು ಸರಣಿ ಟ್ವೀಟ್ ಗಳು ಪ್ರಕಟವಾಗಿದ್ದವು. ಈ ಟ್ವೀಟ್ ಗಳನ್ನು ಈಗ ಟ್ವಿಟರ್ ತೆಗೆದು ಹಾಕಿದ್ದು, ಖಾತೆಯ ನಿಯಂತ್ರಣ ಪಡೆದಿದೆ.

Join Whatsapp
Exit mobile version