Home ಟಾಪ್ ಸುದ್ದಿಗಳು ಪ್ರಧಾನಿ ಮೋದಿ ಹುಟ್ಟು ಹಬ್ಬ; ಶುಭ ಹಾರೈಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್

ಪ್ರಧಾನಿ ಮೋದಿ ಹುಟ್ಟು ಹಬ್ಬ; ಶುಭ ಹಾರೈಸಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್

ತಾಷ್ಕೆಂಟ್: ಪ್ರಧಾನಿ ನರೇಂದ್ರ ಮೋದಿ ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ.
ಉಜ್ಬೇಕಿಸ್ತಾನದ ಸಮರ್ಕಂದ್ ನಗರದಲ್ಲಿ ಶುಕ್ರವಾರ ನಡೆದ ಶಾಂಘೈ ಸಹಕಾರ ಸಂಘಟನೆಯ ವಾರ್ಷಿಕ ಶೃಂಗಸಭೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ನಡೆಸಿದ ಸಭೆಯಲ್ಲಿ ಪುಟಿನ್‌ ಮೋದಿಗೆ ಶುಭ ಹಾರೈಸಿದ್ದಾರೆ.


ನಾನು ಭಾರತಕ್ಕೆ ಶುಭ ಹಾರೈಸುತ್ತೇನೆ. ನನ್ನ ಆತ್ಮೀಯ ಗೆಳೆಯರಾದ ನೀವು ನಾಳೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದು ನನಗೆ ತಿಳಿದಿದೆ. ರಷ್ಯಾದ ಸಂಪ್ರದಾಯದ ಪ್ರಕಾರ, ನಾವು ಎಂದಿಗೂ ಮುಂಚಿತವಾಗಿ ಅಭಿನಂದನೆಗಳನ್ನು ನೀಡುವುದಿಲ್ಲ. ಆದರೆ ಈಗ ನಾನು ಹಾಗೆ ಮಾಡಲಾರೆ. ಆದರೆ ನಾನು ನಿಮಗೆ ಶುಭ ಹಾರೈಸುತ್ತಿದ್ದೇವೆ. ಸೌಹಾರ್ದಯುತ ಭಾರತಕ್ಕಾಗಿ ನಾನು ಶುಭ ಹಾರೈಸುತ್ತೇನೆ… ನಿಮ್ಮ ನಾಯಕತ್ವದಲ್ಲಿ ಭಾರತವು ಸಮೃದ್ಧವಾಗಲೆಂದು ಬಯಸುತ್ತೇನೆ ಎಂದು ಶುಭ ಕೋರಿದ್ದಾರೆ.


ರಷ್ಯಾ ಮತ್ತು ಭಾರತದ ನಡುವಿನ ಸಂಬಂಧಗಳು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದು, ಕಾರ್ಯತಂತ್ರದ ವಿಶೇಷ ಪಾಲುದಾರಿಕೆಯ ಸ್ವರೂಪವನ್ನು ಹೊಂದಿವೆ. ಉಭಯ ದೇಶಗಳು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ ಎಂದು ಪುಟಿನ್ ಪ್ರತಿಪಾದಿಸಿದರು.

Join Whatsapp
Exit mobile version