Home ಟಾಪ್ ಸುದ್ದಿಗಳು ಪ್ರಧಾನಿ ಮೋದಿ ಕಾದಿದ್ದು ಕೇವಲ 15 ನಿಮಿಷ, ರೈತರು ಒಂದೂವರೆ ವರ್ಷದಿಂದ ಕಾಯುತ್ತಿದ್ದಾರೆ: ನವಜೋತ್ ಸಿಂಗ್...

ಪ್ರಧಾನಿ ಮೋದಿ ಕಾದಿದ್ದು ಕೇವಲ 15 ನಿಮಿಷ, ರೈತರು ಒಂದೂವರೆ ವರ್ಷದಿಂದ ಕಾಯುತ್ತಿದ್ದಾರೆ: ನವಜೋತ್ ಸಿಂಗ್ ಸಿಧು ತಿರುಗೇಟು

ಚಂಡೀಗಡ: ಪ್ರಧಾನಿ ಮೋದಿ ಟ್ರಾಫಿಕ್ ಜಾಮ್ ನಲ್ಲಿ ಕಾದಿದ್ದು ಕೇವಲ 15 ನಿಮಿಷವಾದರೆ ರೈತರು ಕಳೆದ ಒಂದೂವರೆ ವರ್ಷದಿಂದ ಕಾಯುತ್ತಿದ್ದಾರೆ ಎಂದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ತಿರುಗೇಟು ನೀಡಿದ್ದಾರೆ.

‘ನಮ್ಮ ರೈತ ಸಹೋದರರು ದೆಹಲಿಯ ಗಡಿಯಲ್ಲಿ ಕಳೆದ ಒಂದೂವರೆ ವರ್ಷಕ್ಕೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. ಅವರು ಒಂದೂವರೆ ವರ್ಷ ಅಲ್ಲಿಯೇ ಇದ್ದರು. ಈ ಬಗ್ಗೆ ನಿಮ್ಮ ಮಾಧ್ಯಮಗಳು ಏನನ್ನೂ ಹೇಳಲಿಲ್ಲವೇಕೆ’ ಎಂದು ಸಿಧು ಮಾಧ್ಯಮಗಳ ಮೇಲೆ ಕಿಡಿಕಾರಿದ್ದಾರೆ.

ಪಂಜಾಬ್ ನ ಫಿರೋಜ್ ಪುರದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ತೆರಳುತ್ತಿದ್ದಾಗ ರೈತರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ತೆರಳದೆ ದೆಹಲಿಗೆ ವಾಪಸಾಗಿದ್ದರು. ಇದನ್ನು ಬಿಜೆಪಿ ಭದ್ರತಾ ಲೋಪ ಎಂದು ಆರೋಪಿಸಿದೆ.

Join Whatsapp
Exit mobile version