Home ಟಾಪ್ ಸುದ್ದಿಗಳು ಮೋದಿ ಮಂಗಳೂರಿಗೆ: ಬಿಜೆಪಿ ಕಾರ್ಯಕ್ರಮಕ್ಕೆ ಬುಕ್ ಆದ ಸಾರಿಗೆ ಸಂಸ್ಥೆ: ಬಸ್ಸಿಲ್ಲದೆ ಪರದಾಡುತ್ತಿರುವ ಪ್ರಯಾಣಿಕರು

ಮೋದಿ ಮಂಗಳೂರಿಗೆ: ಬಿಜೆಪಿ ಕಾರ್ಯಕ್ರಮಕ್ಕೆ ಬುಕ್ ಆದ ಸಾರಿಗೆ ಸಂಸ್ಥೆ: ಬಸ್ಸಿಲ್ಲದೆ ಪರದಾಡುತ್ತಿರುವ ಪ್ರಯಾಣಿಕರು

ಮಂಗಳೂರು: ಪ್ರಧಾನಿ ಮೋದಿ ಮಂಗಳೂರಿಗೆ ಬರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿದ್ದ ಬಹುತೇಕ ಎಲ್ಲಾ ಕರ್ನಾಟಕ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ಸುಗಳು ಬಿಜೆಪಿಯ ಕಾರ್ಯಕ್ರಮಕ್ಕೆ ಬುಕ್ ಆಗಿದ್ದು ಸಾರ್ವಜನಿಕರು ಬಸ್ಸಿಲ್ಲದೆ ಪರದಾಡುವಂತಾಗಿದೆ.

ಕಾರ್ಯಕ್ರಮಕ್ಕೆ ಜನಸೇರಿಸುವ ಭರದಲ್ಲಿ ಶಾಸಕರು ಮತ್ತು ಬಿಜೆಪಿ ಮುಖಂಡರು ಬೆಳ್ತಂಗಡಿ, ಉಪ್ಪಿನಂಗಡಿ, ವಿಟ್ಲ, ಪುತ್ತೂರು ಭಾಗದಿಂದ ಮಂಗಳೂರಿಗೆ ಬರುವ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳನ್ನು ಬುಕ್ ಮಾಡಿದ್ದು ಸಾರ್ವಜನಿಕರು ನಗರಕ್ಕೆ ಬರಲು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಬಂದಿದೆ.

ಕಾರ್ಯಕ್ರಮಕ್ಕೆ ಜನಸೇರಿಸುವ ಉದ್ದೇಶದಿಂದ ಜನರಿಗೆ ಉಚಿತ ಪ್ರಯಾಣವನ್ನು ಬಿಜೆಪಿ ಮುಖಂಡರು ಏರ್ಪಡಿಸಿದ್ದು, ಆ ದೆಸೆಯಲ್ಲಿ ಕಾರ್ಯನಿಮಿತ್ತ ಮಂಗಳೂರಿಗೆ ಬರುವ ಸಾರ್ವಜನಿಕರು ಕಂಗಾಲಾಗಿದ್ದಾರೆ.

ದೈನಂದಿನ ಕೆಲಸ ಕಾರ್ಯಗಳಿಗೆ ಮಂಗಳೂರು ನಗರಕ್ಕೆ ಬರಬೇಕಾದ ಸಾವಿರಾರು ಕಾರ್ಮಿಕರು, ನೌಕರರು, ವ್ಯಾಪಾರಿಗಳು ಮೋದಿ ಭೇಟಿಯಿಂದಾಗಿ ಸಂಕಷ್ಟಕ್ಕೆ ಒಳಗಾದರು. ಕೆಲವರು ಬೈಕ್ ಮತ್ತಿತರ ಖಾಸಗಿ ವಾಹನಗಳಲ್ಲಿ ಬಂದರೆ ನಗರದ ಸುತ್ತಮುತ್ತಲಿನ ನಿವಾಸಿಗಳು ನಡೆದುಕೊಂಡೇ ನಗರ ಸೇರುತ್ತಿದ್ದ ದೃಶ್ಯ ಕಂಡುಬಂತು. ಖಾಸಗಿ ವಾಹನದಲ್ಲಿ ಬರುವವರು ಕೂಡ ಸಂಚಾರ ದಟ್ಟಣೆಯಿಂದಾಗಿ ತೊಂದರೆ ಒಳಗಾದರು. ಕೆಲವರು ಬಿಜೆಪಿಗೆ ಹಿಡಿಶಾಪ ಹಾಕುತ್ತಿದ್ದುದು ಕೇಳಿಬಂತು.

Join Whatsapp
Exit mobile version