Home ಟಾಪ್ ಸುದ್ದಿಗಳು ಏಪ್ರಿಲ್ 28, 29 ರಂದು ಪ್ರಧಾನಿ ಮೋದಿ ಉತ್ತರ ಕರ್ನಾಟಕಕ್ಕೆ ಆಗಮನ

ಏಪ್ರಿಲ್ 28, 29 ರಂದು ಪ್ರಧಾನಿ ಮೋದಿ ಉತ್ತರ ಕರ್ನಾಟಕಕ್ಕೆ ಆಗಮನ

ಬೆಳಗಾವಿ: ಲೋಕಸಭೆ ಚುನಾವಣೆಗೆ ದಿನಾಂಕ ಘೋಷಣೆಯಾದ ಬಳಿಕ ಪ್ರಧಾನಿ ಮೋದಿ ಮೊದಲ ಬಾರಿಗೆ ಉತ್ತರ ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಎಪ್ರಿಲ್ 28 ಹಾಗೂ 29 ರಂದು ಆರು ಕಡೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮೆಗಾ ಕ್ಯಾಂಪೇನ್ ಮಾಡಲಿದ್ದಾರೆ.

ಎಪ್ರಿಲ್ 28 ರಂದು ದಾವಣಗೆರೆ, ಕಾರವಾರ, ಬೆಳಗಾವಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ. ಅಂದು ಪ್ರಧಾನಿ ಮೋದಿ ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ವಿಟಿಯು ಗೆಸ್ಟ್ ಹೌಸ್, ಐಟಿಸಿ ವೆಲ್ ಕಮ್, ಮೇರಿಯಟ್, ಯುಕೆ-27 ಯಾವುದಾರು ಒಂದು ಹೊಟೇಲ್ ನಲ್ಲಿ ತಂಗಲಿದ್ದಾರೆ.

ಎಸ್ ಪಿಜಿ ಪರಿಶೀಲನೆ ಬಳಿಕ ಹೊಟೇಲ್ ನಿಗದಿಯಾಗಲಿದೆ. ಎಪ್ರಿಲ್ 29 ರಂದು ವಿಜಯಪುರ, ಕೊಪ್ಪಳ ಹಾಗೂ ಕಲಬುರಗಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ.

Join Whatsapp
Exit mobile version