Home ಟಾಪ್ ಸುದ್ದಿಗಳು ‘ನಮ್ಮ ಜನಪ್ರಿಯ, ದೂರದೃಷ್ಟಿಯ ನಾಯಕ’ ; ಮೋದಿಯನ್ನು ಶ್ಲಾಘಿಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎಂ.ಆರ್.ಶಾ!

‘ನಮ್ಮ ಜನಪ್ರಿಯ, ದೂರದೃಷ್ಟಿಯ ನಾಯಕ’ ; ಮೋದಿಯನ್ನು ಶ್ಲಾಘಿಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಎಂ.ಆರ್.ಶಾ!

ಅಹಮದಾಬಾದ್: ಗುಜರಾತ್ ಹೈಕೋರ್ಟ್‌ನ ವಜ್ರ ಮಹೋತ್ಸವ ಸಂಭ್ರಮಾಚರಣೆಯಲ್ಲಿ ಮೋದಿ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಎಂ.ಆರ್.ಶಾ ಹಾಡಿ ಹೊಗಳಿದ್ದಾರೆ. ವಜ್ರ ಮಹೋತ್ಸವದ ಸ್ಮರಣಾರ್ಥ ಅಂಚೆಚೀಟಿ ಅನಾವರಣಗೊಳಿಸುವ ವರ್ಚುವಲ್ ಸಮಾರಂಭದಲ್ಲಿ ಅವರು ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ.

ಮೋದಿಯವರನ್ನು ‘ನಮ್ಮ ಅತ್ಯಂತ ಜನಪ್ರಿಯ, ಪ್ರೀತಿಯ, ಶಕ್ತಿಯುತ ಮತ್ತು ದೂರದೃಷ್ಟಿಯ ನಾಯಕ’ ಎಂದು ಅವರು ಶ್ಲಾಘಿಸಿದ್ದಾರೆ. ಗುಜರಾತ್ ಹೈ ಕೋರ್ಟಿನ 60ನೇ ವರ್ಷಾಚರಣೆಯ ಸ್ಮಾರಣಾರ್ಥ ಅಂಚೆಚೀಟಿ ಬಿಡುಗಡೆಗೊಳಿಸುವ ಈ ಮಹತ್ವದ ಕಾರ್ಯಕ್ರಮದ ಭಾಗವಾಗಲು ನನಗೆ ಸಂತೋಷ ಮತ್ತು ಹೆಮ್ಮೆ ಇದೆ. ಅದೂ ಕೂಡ ನಮ್ಮ ಅತ್ಯಂತ ಜನಪ್ರಿಯ, ಪ್ರೀತಿಯ, ಶಕ್ತಿಯುತ ಮತ್ತು ದೂರದೃಷ್ಟಿಯ ನಾಯಕ ಮತ್ತು ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಭಾಗವಹಿಸುವುದು ತುಂಬಾ ಸಂತೋಷವಾಗುತ್ತಿದೆ ಎಂದಾಗಿತ್ತು ನ್ಯಾಯಮೂರ್ತಿ ಎಂ.ಆರ್.ಶಾ ಅವರ ಭಾಷಣ.

Join Whatsapp
Exit mobile version