Home ಟಾಪ್ ಸುದ್ದಿಗಳು ಮೋದಿ ಅವರು ಸಾವಧಾನದಿಂದಲೇ ನಮ್ಮ ಅಹವಾಲು ಆಲಿಸಿದ್ದಾರೆ: ಪ್ರಧಾನಿ ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿಕೆ

ಮೋದಿ ಅವರು ಸಾವಧಾನದಿಂದಲೇ ನಮ್ಮ ಅಹವಾಲು ಆಲಿಸಿದ್ದಾರೆ: ಪ್ರಧಾನಿ ಭೇಟಿ ಬಳಿಕ ಸಿಎಂ ಸಿದ್ದರಾಮಯ್ಯ ಹೇಳಿಕೆ

ನವದೆಹಲಿ: ಸಂಸತ್ ಭವನದಲ್ಲಿ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಮೋದಿ ಅವರು ಸಾವಧಾನದಿಂದಲೇ ನಮ್ಮ ಅಹವಾಲು ಆಲಿಸಿದ್ದಾರೆ ಎಂದರು.

ಬರ ಪರಿಹಾರ, ನೀರಾವರಿ ಯೋಜನೆಗಳ ಬಗ್ಗೆ ಮೋದಿ ಜೊತೆ ಚರ್ಚೆ ನಡೆಸಲಾಗಿದೆ. ಬರದಿಂದಾಗಿ ರಾಜ್ಯದಲ್ಲಿ 35 ಸಾವಿರ ಕೋಟಿ ರೂ. ಬೆಳೆ ನಷ್ಟವಾಗಿದೆ. ಕೇಂದ್ರ ಸಚಿವ ಅಮಿತ್ ಶಾ ಉನ್ನತಮಟ್ಟದ ಸಮಿತಿಯ ಸಭೆ ಮಾಡಿಲ್ಲ. ಕೂಡಲೇ ಸಭೆ ಕರೆಯುವಂತೆ ಪ್ರಧಾನಿ ಮೋದಿಗೆ ಮನವಿ ಮಾಡಿದ್ದೇವೆ. ನಮ್ಮ ಅಹವಾಲನ್ನು ಪ್ರಧಾನಿ ಮೋದಿ ಸಮಾಧಾನದಿಂದ ಆಲಿಸಿದ್ದಾರೆ. ಸಭೆ ಕರೆಯುವಂತೆ ಅಮಿತ್ ಶಾಗೆ ಸೂಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು.

Join Whatsapp
Exit mobile version