ನವದೆಹಲಿ: ಪ್ರಧಾನಿ ಮೋದಿ ಸೆಪ್ಟೆಂಬರ್ ಅಂತ್ಯಕ್ಕೆ ಅಮೆರಿಕಾಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕದಲ್ಲಿ ಜೋ ಬಿಡೆನ್ ಅಧಿಕಾರಕ್ಕೆ ಬಂದ ಬಳಿಕ ನರೇಂದ್ರ ಮೋದಿ ಇದೇ ಮೊದಲ ಬಾರಿ ಅವರ ಭೇಟಿಗೆ ಮುಂದಾಗಿದ್ದು. ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನು ದೃಢವಾಗಿಲ್ಲ. ಆದರೆ ಅವರು ಭೇಟಿ ನೀಡುವ ಹೆಚ್ಚಿನ ಸಾಧ್ಯತೆ ಇದೆ. ಭೇಟಿಯ ದಿನ ನಿಗದಿ ಕುರಿತು ಇನ್ನು ಅಂತಿಮವಾಗಿಲ್ಲ. ಬಹುಶಃ ಅವರು ಸೆ. 23- 24ರಂದ್ರ ಪ್ರವಾಸ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ..
ವಾಷಿಂಗ್ ಟನ್ ಭೇಟಿಯ ನಂತರ ಮೋದಿ ನ್ಯೂಯಾರ್ಕ್ ಗೆ ತೆರಳಲಿದ್ದು ಅಲ್ಲಿ ಉನ್ನತ ಮಟ್ಟದ ವಿಶ್ವಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
2019ರಲ್ಲಿ ಅಮೆರಿಕಕ್ಕೆ ಕೊನೆ ಬಾರಿ ಪ್ರಧಾನಿ ಮೋದಿ ಭೇಟಿ ನೀಡಿದ್ದರು. ಇಲ್ಲಿ ನಡೆದ ಹೌಡಿ ಮೋದಿ ಬೃಹತ್ ವಲಸೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.