Home ಜಾಲತಾಣದಿಂದ ದಾವೂದಿ ಬೊಹ್ರಾ ಇನ್ ಸ್ಟಿಟ್ಯೂಟ್ ಉದ್ಘಾಟಿಸಿದ ಪ್ರಧಾನಿ: ನಾನೂ ನಿಮ್ಮವನೇ ಎಂದ ಮೋದಿ

ದಾವೂದಿ ಬೊಹ್ರಾ ಇನ್ ಸ್ಟಿಟ್ಯೂಟ್ ಉದ್ಘಾಟಿಸಿದ ಪ್ರಧಾನಿ: ನಾನೂ ನಿಮ್ಮವನೇ ಎಂದ ಮೋದಿ

ಮುಂಬೈ: ಮುಂಬೈಯ ಅಂಧೇರಿ ಹೊರ ವಲಯದ ಮರೋಳ್’ನಲ್ಲಿ ದಾವೂದಿ ಬೊಹ್ರಾ ಸಮುದಾಯದವರ ಅಲ್ ಜಾಮಿಯಾತುಸ್ಸೈಫಿಯಾ ಅರಬಿಕ್ ಅಕಾಡೆಮಿಯ ಕ್ಯಾಂಪಸ್ ಅನ್ನು ಉದ್ಘಾಟನೆ ಮಾಡಿದ ಪ್ರಧಾನಿ ಮೋದಿಯವರು ನಾನೂ ನಿಮ್ಮವನೇ ಎಂದು ಹೇಳಿದರು.

ಬೊಹ್ರಾ ಸಮುದಾಯದ  ಅಧ್ಯಾತ್ಮ ನಾಯಕ ಸೈಯ್ಯದ್ ಮುಫದ್ದಾಲ್ ಸೈಫುದ್ದೀನ್ ಅವರಿಗೆ ನಮಿಸಿದ ಮೋದಿ, ಬೊಹ್ರಾ ಸಮುದಾಯದೊಂದಿಗಿನ ತಮ್ಮ ಒಡನಾಟವನ್ನು ಸ್ಮರಿಸಿದರು.

“ನಾನು ಒಬ್ಬ ಕುಟುಂಬದ ಸದಸ್ಯನಂತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವೆನೇ ಹೊರತು ಪ್ರಧಾನಿಯಾಗಿ ಅಲ್ಲ. ದಾವೂದಿ ಬೊಹ್ರಾ ಸಮುದಾಯದೊಡನೆ ನಾವು ಹಿಂದಿನ ಕಾಲದಿಂದಲೂ ತಲೆಮಾರುಗಳಾಗಿ ಸಂಪರ್ಕ ಹೊಂದಿದ್ದೇವೆ. ನಿಮ್ಮ ನಡುವೆ ಬಂದಿರುವುದು ಕುಟುಂಬ ಸದಸ್ಯರ ನಡುವೆ ಬಂದು ನಿಂತಂತೆ ಇದೆ. ನಾನು ಇಂದು ನಿಮ್ಮ ವೀಡಿಯೋ ನೋಡಿದೆ. ನನ್ನದೊಂದು ದೂರು ಇದೆ. ನೀವು ಮತ್ತೆ ಮತ್ತೆ ಪ್ರಧಾನಿ ಇಲ್ಲವೇ ಮುಖ್ಯಮಂತ್ರಿ ಎಂದು ಹೇಳಬಹುದು. ನಾನು ಇಲ್ಲಿ ಪ್ರಧಾನಿಯೂ ಅಲ್ಲ, ಮುಖ್ಯಮಂತ್ರಿಯೂ ಅಲ್ಲ, ನಾನು ನಿಮ್ಮ ಕುಟುಂಬದ ಸದಸ್ಯ. ನಾನು ನಿಮ್ಮ ಕೆಲವರೊಡನೆ ಸೇರಿಕೊಳ್ಳುವ ಅದೃಷ್ಟ ಪಡೆದಿದ್ದೇನೆ. ಈ ಕುಟುಂಬದೊಂದಿಗೆ ನಾನು ನಾಲ್ಕು ತಲೆಮಾರುಗಳಿಂದ ಸಂಬಂಧ ಹೊಂದಿದ್ದೇನೆ. ಆ ನಾಲ್ಕೂ ತಲೆಮಾರಿನವರು ನನ್ನ ಮನೆಗೆ ಭೇಟಿ ನೀಡಿದ್ದಾರೆ.” ಎಂದು ಪ್ರಧಾನಿ ಮೋದಿ ಹೇಳಿದರು.

Join Whatsapp
Exit mobile version