► ಬಳೆ ಮಾರಾಟಗಾರನ ಪರ ನಿಂತು FIR ದಾಖಲಿಸಲು ನೆರವಾಗಿದ್ದ ಸಂಘಟನೆ
ಇಂದೋರ್ : ಮುಸ್ಲಿಂ ಬಳೆಗಾರನ ಮೇಲೆ ಹಿಂದುತ್ವ ಮತೀಯ ವಾದಿಗಳು ಮಾರಣಾಂತಿಕ ಹಲ್ಲೆ ನಡೆಸಿ ದರೋಡೆ ನೆಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪಿಎಫ್ಐ ಸಂಘಟನೆ ಪ್ರತಿಭಟನೆ ನಡೆಸಿತ್ತು. ಅಲ್ಲದೆ ಹಿಂದುತ್ವವಾದಿಗಳ ವಿರುಧ್ದ FIR ದಾಖಲಿಸಲು ಯುವಕನಿಗೆ ನೆರವಾಗಿತ್ತು. ಈ ಕುರಿತು ಇಂದು ಮದ್ಯಪ್ರದೇಶ ಗ್ರಹ ಸಚಿವ ನರೋತ್ತಮ್ ಮಿಶ್ರ ಪಿಎಫ್ ಐ ಸಂಘಟನೆಯನ್ನು ನಿಷೇಧಿಸುವ ಚಿಂತನೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
ಮುಸ್ಲಿಂ ಸಮುದಾಯದ ಪ್ರತಿನಿಧಿಯೊಬ್ಬರು ಪಿಎಫ್ ಐ ನಿಷೇಧಿಸಲು ಮನವಿ ಮಾಡಿದ್ದಾರೆ, ಈ ಕುರಿತು ಪರಿಶೀಲನೆಗೆ ಕಳುಹಿಸಿದ್ದು, ಮದ್ಯಪ್ರದೇಶದಲ್ಲಿ ಪಿಎಫ್ ಐ ನಿಷೇಧಿಸುವ ಕುರಿತು ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.
ಬಳೆಗಾರನ ಮೆಲೆ ಹಿಂದುತ್ವ ಶಕ್ತಿಗಳು ಹಲ್ಲೆ ನಡೆಸಿದ್ದುದರ ವಿರುದ್ಧವಾಗಿ ಪ್ರತಿಭಟನೆ ನಡೆಸಿದ್ದ ಪ್ರಕರಣಕ್ಕೆ ಪ್ರತಿಕ್ರಿಯಿಸಿದ್ದ ಜಿಲ್ಲಾಧಿಕಾರಿ ಪಿಎಫ್ ಐ ಮತ್ತು ಎಸ್ ಡಿ ಪಿಐ ಅರಾಜಕತೆ ಸೃಷ್ಟಿಸುವ ಹುನ್ನಾರದಿಂದ ಜನರನ್ನು ಸೇರಿಸಿ ಪ್ರತಿಭಟಿಸಿತ್ತು, ಅವರ ಮೇಲೆ ಕಣ್ಗಾವಲು ಇರಿಸಿದ್ದೇವೆ ಎಂದಿದ್ದರು.