ನವದೆಹಲಿ: ಅಫ್ಘಾನಿಸ್ಥಾನದಲ್ಲಿ ಪತನಗೊಂಡ ವಿಮಾನ ಭಾರತದ್ದಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಪತನಗೊಂಡ ವಿಮಾನ ದೆಹಲಿಯಿಂದ ಮಾಸ್ಕೋಗೆ ತೆರಳುತ್ತಿತ್ತು ಎಂದು ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.
ದುರದೃಷ್ಟಕರ ಘಟನೆಯಲ್ಲಿ ಅಫ್ಘಾನಿಸ್ಥಾನದಲ್ಲಿ ಪತನಗೊಂಡ ವಿಮಾನ ಭಾರತದ್ದೂ ಅಲ್ಲ, ಚಾರ್ಟರ್ ಏರ್ ಕ್ರಾಫ್ಟ್ ಕೂಡ ಅಲ್ಲ, ಹೆಚ್ಚಿನ ವಿವರಗಳಿಗಾಗಿ ಕಾಯುತ್ತಿದ್ದೇವೆ ಎಂದು ಪ್ರಯಾಣಿಕ ವಿಮಾನಯಾನ ಸಚಿವಾಲಯ ಹೇಳಿದೆ.