Home ಟಾಪ್ ಸುದ್ದಿಗಳು ಪೀರ್ ಪಾಷಾ ಬಂಗಲೆ ಹಿಂದೂಗಳಿಗೆ ಹಸ್ತಾಂತರವಾಗಲಿ ಎಂದ ಶಿವಾಚಾರ್ಯ ಸ್ವಾಮೀಜಿ

ಪೀರ್ ಪಾಷಾ ಬಂಗಲೆ ಹಿಂದೂಗಳಿಗೆ ಹಸ್ತಾಂತರವಾಗಲಿ ಎಂದ ಶಿವಾಚಾರ್ಯ ಸ್ವಾಮೀಜಿ

ಬೆಳಗಾವಿ: ‘ಬಸವ ಕಲ್ಯಾಣದಲ್ಲಿರುವ ಪೀರ್ ಪಾಷಾ ಬಂಗಲೆ ಬಸವಣ್ಣನವರು ಸ್ಥಾಪಿಸಿದ ಮೂಲ ‘ಅನುಭವ ಮಂಟಪ’ವಾಗಿದ್ದು, ಅದನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಪತ್ರಕರ್ತರೊಂದಿಗೆ ಮಾತನಾಡಿದ ಅವರು,‘ಸರ್ಕಾರವು ಕೂಡಲೆ ಮಧ್ಯಪ್ರವೇಶಿಸಿ ಮುಸ್ಲಿಮರೊಂದಿಗೆ ಸೌಹಾರ್ದದಿಂದ ಚರ್ಚಿಸಿ ಆ ಮೂಲ ಅನುಭವ ಮಂಟಪದ ಸ್ಥಳವನ್ನು ಹಿಂದೂಗಳಿಗೆ ಹಸ್ತಾಂತರಿಸಬೇಕು’ಎಂದು ಒತ್ತಾಯಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ಮುಖಂಡ ಪ್ರದೀಪ ಕಂಕಣವಾಡಿ, ‘ಬಸವಣ್ಣನವರು ರಚಿಸಿದ ‘ಅನುಭವ ಮಂಟಪ’ ವಿಶ್ವದ ಪ್ರಥಮ ಸಂಸತ್ ಆಗಿದೆ. ಶರಣರ ನಾಡನ್ನು ನಿಜಾಮರು ಕೈವಶ ಮಾಡಿಕೊಂಡಿರುವುದು ನಮ್ಮ ದುರಂತ. ಪೀರ್ ಪಾಷಾ ಬಂಗಲೆಯನ್ನು ಸರ್ಕಾರ ವಶಕ್ಕೆ ಪಡೆದು ಸ್ಮಾರಕ ಮಾಡಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಮ್ಮ ಬೇಡಿಕೆಗೆ ಸ್ಪಂದಿಸದಿದ್ದರೆ ಜೂನ್ 12ರಂದು ಮಠಾಧೀಶರ ನೇತೃತ್ವದಲ್ಲಿ ಹೋರಾಟ ಮಾಡಲಾಗುವುದು’ ಎಂದು ತಿಳಿಸಿದರು.

Join Whatsapp
Exit mobile version