ಇಂದು ಬಹುತೇಕರ ವಾಟ್ಸಪ್ ಮತ್ತು ಇತರೆ ಸಾಮಾಜಿಕ ತಾಣಗಳ ವೇದಿಕೆಗಳಲ್ಲಿ ಪಿಂಕ್ ವಾಟ್ಸಪ್ ಎಂಬ ಹೊಸ ವಾಟ್ಸಪ್ ವರ್ಶನ್ ಬಂದಿದೆ ಎಂದು ಅದನ್ನು ಒತ್ತಲು ಹೇಳಿ ಲಿಂಕ್ ಕಳಿಸಿದ್ದರು. ಇದನ್ನು ನಿಜವೆಂದು ತಿಳಿದು ಒತ್ತಿದವರಿಗೆ ತಿಳಿಯದೆಯೇ ಅವರಿರುವ ಎಲ್ಲಾ ಗ್ರೂಪುಗಳಿಗೆ ಅದರ ಲಿಂಕ್ ಹಂಚಿಕೆಯಾಗುತ್ತಿತ್ತು. ಹೀಗೆ ಅದೇ ಸಂದೇಶ ಪ್ರತಿ ವಾಟ್ಸಪ್ ಗ್ರೂಪುಗಳಲ್ಲಿ ಇಂದು ಹಲವಾರು ಬಾರಿ ಪುನರಾವರ್ತನೆಯಾಗುತ್ತಿತ್ತು.
ವಾಸ್ತವದಲ್ಲಿ ಇದೊಂದು ವೈರಸ್ ರೂಪವಾಗಿದ್ದು, ಇದನ್ನು ಒತ್ತಿದವರ ಮೊಬೈಲ್ ಹಾಗೂ ವಾಟ್ಸಪ್ ಕೆಲ ಕಾಲ ಸ್ಥಗಿತಗೊಳ್ಳುತ್ತಿತ್ತು. ಪಿಂಕ್ ವಾಟ್ಸಪ್ ಅನ್ನೋದು ಮೋಡ್ ವಾಟ್ಸಪ್ ಮಾದರಿಯಲ್ಲಿ ಇರುವ ಆಪ್ ಆಗಿದ್ದು, ಅಧಿಕೃತ ವಾಟ್ಸಪ್ ಸಂಸ್ಥೆಯದ್ದು ಅಲ್ಲ. ಆದರೆ ಒಂದೇ ಮೊಬೈಲಿನಲ್ಲಿ ಎರಡು ವಾಟ್ಸಪ್ಪನ್ನು ಬಳಸುವವರಿಗೆ ಇದು ಸಹಕಾರಿಯಾಗುತ್ತದೆ ಎನ್ನಲಾಗಿದೆ. ಈ ಲಿಂಕನ್ನು ಒತ್ತದಂತೆ ಜನರನ್ನು ಎಚ್ಚರಿಸಲಾಗಿದೆ.