Home ಕರಾವಳಿ ಪಿಲಿಚಾಮುಂಡಿ ದೈವದ ಭಂಡಾರಮನೆ ಧ್ವಂಸ: ಮೂವರ ಬಂಧನ

ಪಿಲಿಚಾಮುಂಡಿ ದೈವದ ಭಂಡಾರಮನೆ ಧ್ವಂಸ: ಮೂವರ ಬಂಧನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ ದೈವಸ್ಥಾನದ ನಿರ್ಮಾಣ ಹಂತದ ಭಂಡಾರ ಮನೆ ಕಟ್ಟಡವನ್ನು ರಾತ್ರೋರಾತ್ರಿ ಜೆಸಿಬಿ ಮೂಲಕ ಕಿಡಿಗೇಡಿಗಳು ಧ್ವಂಸ ಮಾಡಿದ್ದರು. ಘಟನೆ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಮುತ್ತಣ್ಣ ಶೆಟ್ಟಿ, ಧೀರಜ್ ಹಾಗೂ ಶಿವರಾಜ್ ಬಂಧಿತರು.

ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪುರಾಣ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಕೊಂಡಾಣ ಪಿಲಿಚಾಮುಂಡಿ ದೇವಸ್ಥಾನದ ನಿರ್ಮಾಣ ಹಂತದ ಭಂಡಾರ ಮನೆಯನ್ನು ಬಣ ಸಂಘರ್ಷದ ಕಾರಣದಿಂದಾಗಿ ರಾತ್ರೋ ರಾತ್ರಿ ಜೆಸಿಬಿ ಬಳಸಿ ಕೆಡವಲಾಗಿತ್ತು ಎನ್ನಲಾಗಿದೆ.

ಸಂಬಂಧ ಕೋಟೆಕಾರು ಪಟ್ಟಣ ಪಂಚಾಯ್ತಿಯ ಮುಖ್ಯಾಧಿಕಾರಿ ಆನಂದ್ ಎಂಬುವರು ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆಯಲ್ಲಿ ಇಂದು ಉಳ್ಳಾಲ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

Join Whatsapp
Exit mobile version