Home ಟಾಪ್ ಸುದ್ದಿಗಳು ಉದ್ಧವ್ ಠಾಕ್ರೆ, ಆದಿತ್ಯ, ಸಂಜಯ್ ರಾವುತ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಪಿಐಎಲ್

ಉದ್ಧವ್ ಠಾಕ್ರೆ, ಆದಿತ್ಯ, ಸಂಜಯ್ ರಾವುತ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಪಿಐಎಲ್

ಮುಂಬೈ: ಸಾರ್ವಜನಿಕರ ಶಾಂತಿ ಕದಡಿದ್ದಕ್ಕಾಗಿ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಅವರ ಮಗ ಆದಿತ್ಯ ಠಾಕ್ರೆ, ಶಿವಸೇನೆ ಸಂಸದ ಸಂಜಯ್ ರಾವುತ್ ವಿರುದ್ಧ ದೇಶದ್ರೋಹದ ಎಫ್ ಐಆರ್ ದಾಖಲಿಸುವಂತೆ ಬಾಂಬೆ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಲಾಗಿದೆ.

ಶಿವಸೇನೆ ಮತ್ತು ಬಂಡಾಯ ಶಾಸಕರ ವಿಷಯದಲ್ಲಿ ಸರಕಾರ ಶಾಂತಿ ಕೆಡಿಸಿದೆ ಎಂದು ಆರೋಪ ಮಾಡಲಾಗಿದೆ.

ಪೂನಾದ ಸಾಮಾಜಿಕ ಕಾರ್ಯಕರ್ತ ಹೇಮಂತ ಪಾಟೀಲ್ ಎನ್ನುವವರು ಈ ಪಿಐಎಲ್- ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದಾರೆ. ಬಂಡಾಯ ಶಾಸಕರ ನಾಯಕ ಏಕನಾಥ ಶಿಂಧೆ ವಿರುದ್ಧ ಇವರು ಹೇಳಿಕೆ ನೀಡದಂತೆ ತಾಕೀತು ಮಾಡುವಂತೆಯೂ ಅರ್ಜಿಯಲ್ಲಿ ಕೋರಲಾಗಿದೆ. ಬಂಡಾಯಗಾರರ ವಿರುದ್ಧ ಶಿವಸೇನೆಯವರು ನಾನಾ ಕಡೆ ಪ್ರತಿಭಟನೆ ನಡೆಸಿ ಕೆಟ್ಟ ಶಬ್ದಗಳಿಂದ ನಿಂದಿಸಿದ್ದಾರೆ ಎಂದೂ ಅರ್ಜಿಯಲ್ಲಿ ದೂರಲಾಗಿದೆ.

‘ಉದ್ಧವ್ ಠಾಕ್ರೆ, ಆದಿತ್ಯ ಠಾಕ್ರೆ, ಸಂಜಯ್ ರಾವುತ್ ಆರೇಳು ಜನ ಶಿವ ಸೇನೆಯ ನಾಯಕರ ಬೆದರಿಕೆ ಕಾರಣಕ್ಕಾಗಿ ಬಂಡಾಯ ಶಾಸಕರು ಅಸ್ಸಾಮಿಗೆ ಹೋಗಬೇಕಾಯಿತು’ ಎಂದೂ ಅರ್ಜಿದಲ್ಲಿ ಹೇಳಲಾಗಿದೆ.

ಸಂಜಯ್ ರಾವುತ್ ಅವರು ಬಂಡಾಯ ಶಾಸಕರು 40 ಜನರ ಬಾಡಿ ಮಾತ್ರ ಹಿಂದಕ್ಕೆ ಬರುವುದು ಅದನ್ನು ನೇರವಾಗಿ ಶವಾಗಾರಕ್ಕೆ, ಶವ ಪರೀಕ್ಷೆಗೆ ಕಳುಹಿಸಬೇಕಾಗುತ್ತದೆ ಎಂದೂ ಬೆದರಿಕೆ ಹಾಕಿರುವುದಾಗಿ ಪಿಐಎಲ್ ಆಪಾದಿಸಿದೆ. ಈ ಎಲ್ಲ ಬಗೆಯಲ್ಲಿ ಅವರೆಲ್ಲ ರಾಜ್ಯದ ಶಾಂತಿ ಕೆಡಿಸಿದ್ದಾರೆ ಎಂದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯಲ್ಲಿ ಆಪಾದಿಸಲಾಗಿದೆ. ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್  ವಿಚಾರಣೆಗೆ ಎತ್ತಿಕೊಳ್ಳಬೇಕಾಗಿದೆ.

Join Whatsapp
Exit mobile version