ಮಂಗಳೂರು: ಭಾರತದಲ್ಲಿ ಇದೇ ಮೊದಲ ಬಾರಿಗೆ ಆಗಸ್ಟ್ 2 ಮತ್ತು 3ರಂದು ಫಿಸಿಯೋಸಿಮ್ಕಾನ್ -2022 ಎಂಬ ಆವಿಷ್ಕಾರ ದೇಹ ಭೌತಿಕ ಕಾರ್ಯಾಗಾರವು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ದಶಮಾನ ಸ್ಮಾರಕ ಭವನದಲ್ಲಿ ನಡೆಯಲಿದೆ ಎಂದು ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕ ರೆ.ಫಾ. ರಿಚರ್ಡ್ ಅಲೋಶಿಯಸ್ ಕೊಯೆಲ್ಹೋ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫಾದರ್ ಮುಲ್ಲರ್ ಎಫ್ ಎಂಎಸ್ ಎಸ್ ಸಿ- ಅಣುಕನುಕರಣೆ ಮತ್ತು ಕೌಶಲ್ಯ ಕೇಂದ್ರದ ಸಹಕಾರದಿಂದ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಫಿಸಿಯೋತೆರಪಿ ವಿಭಾಗದವರು ಈ ಕಾರ್ಯಾಗಾರವನ್ನು ಆಯೋಜಿಸಿದ್ದಾರೆ. ಅಮೆರಿಕ ಸಂಯುಕ್ತ ಸಂಸ್ಥಾನದ ಹೃದಯ ಒಕ್ಕೂಟದವರು ಮೊದಲ ಬಾರಿಗೆ ಮಂಗಳೂರಿನಲ್ಲಿ ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ ಮತ್ತು ತುರ್ತು ಕಾರ್ಡಿಯೋ ವಾಸ್ಕುಲರ್ ಗಮನಿಸುವಿಕೆ ಬಗೆಗೆ ಕೋರ್ಸ್ ನಡೆಸುವರು. ಹೃದಯ ಸಂಬಂಧಿ ತೊಂದರೆ ನಿವಾರಣೆಯಲ್ಲಿ ಇದು ತುರ್ತು ಉಪಯೋಗಕ್ಕೆ ಬರುತ್ತದೆ ಎಂದರು.
ಹೃದಯದ ತುರ್ತು ಸಂದರ್ಭದಲ್ಲಿ ಸುಲಭ ಚಿಕಿತ್ಸೆ ಬಗೆಗೆ ಕೆಲವು ದಿನಗಳ ಹಿಂದೆ ಚರ್ಚೆ ನಡೆಯಿತು. ನಾವು ಅಮೆರಿಕದ ಹಾರ್ಟ್ ಅಸೋಸಿಯೇಶನ್‌ನಿಂದ ಅನುಮೋದನೆ ಪಡೆದೆವು. ಇದು ಹೊಸ ಉತ್ತಮ ರೋಗ ಚಿಕಿತ್ಸೆ ಯಾಗಿದ್ದು ಉತ್ತಮ ಪ್ರತಿಕ್ರಿಯೆ ಎಲ್ಲೆಡೆಯಿಂದ ವಿದೇಶದಿಂದಲೂ ಸೇರಿ ಬಂದಿದೆ. ಸಮಾಲೋಚನೆ ಕಾಲದಲ್ಲೇ ಇದು ಯಶಸ್ವಿನತ್ತ ಹೆಜ್ಜೆ ಹಾಕಿದೆ ಎಂಬುದು ಸಂತಸದ ಸಂಗತಿ ಎಂದು ಕೊಯಿಲೊ ಹೇಳಿದರು.
ಬಯೋಸಿಂಕ್ ಫಾರ್ಮಾಸ್ಯೂಟಿಕಲ್, ಮಾಸ್ಲೋಡ್ಸ್ ಫಾರ್ಮಾಸ್ಯೂಟಿಕಲ್ಸ್, ಜೈದುಸ್ ಟಾಪ್ ಕೇರ್ ಸಹ ಇದರಲ್ಲಿ ಸಹಕರಿಸುತ್ತಿದ್ದು, 200 ಡೆಲಿಗೇಟ್ ಗಳಿಗೆ ಅವಕಾಶ ಇದ್ದು ಈಗಾಗಲೇ 150 ಡೆಲಿಗೇಟ್ ಗಳು ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಆಸ್ಪತ್ರೆ ಮತ್ತು ಅದರ ಇತಿಹಾಸ ಹಾಗೂ ಎರಡು ನೂರು ವರುಷಗಳಷ್ಟು ಕಾಲದ ಅದರ ಸೇವೆ ಹಾಗೂ ಹೊಸ ತರಬೇತಿ ಕೇಂದ್ರಗಳ ಬಗ್ಗೆ ರೆವೆ. ಫಾ. ರಿಚರ್ಡ್ ಅಲೋಶಿಯಸ್ ಕೊಯಿಲೊ ಆ ಬಗೆಗಿನ ವೀಡಿಯೋ ಪ್ರದರ್ಶನ ತೆರೆದಿಟ್ಟರು.
ಫಾದರ್ ಮುಲ್ಲರ್ ಸಂಸ್ಥೆಗಳ ಆಡಳಿತಾಧಿಕಾರಿ ಅಜಿತ್ ಬಿ. ಮೆನೆಜಸ್, ಡೀನ್ ಅಂತೋಣಿ ಸಿಲ್ವಾನ್ ಡಿಸೋಜಾ, ಸಂಘಟಕಿ ಚೆರಿಸ್ಮಾ ಡಿಸಿಲ್ವಾ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಅಜಿತ್ ಮೆನೆಜೆಸ್ ಅವರು ಕಾರ್ಯಾಗಾರದ ಬ್ರೋಚರ್ ಬಿಡುಗಡೆ ಮಾಡಿದರು ಹಾಗೂ ಅಂತೋಣಿ ಸಿಲ್ವಾನ್ ಅವರು ಕರೆಯೋಲೆ ಹೊರಗಿಟ್ಟರು.
ಕಾರ್ಯಾಗಾರ ಸಂಘಟಕಿ ಚೆರಿಸ್ಮಾ ಡಿಸಿಲ್ವಾ ಕಾರ್ಯಾಗಾರದ ಬಗೆಗೆ ವಿವರಣೆ ನೀಡಿದರು.