ನವದೆಹಲಿ: ಲೊಕಸಭಾ ಚುನಾವಣೆ ಕುರಿತು ದೆಹಲಿಯ ಭಾರತ್ ಮಂಟಪಂನಲ್ಲಿ ಸಭೆ ಸೇರಿದ ಬಿಜೆಪಿ ರಾಷ್ಟ್ರೀಯ ಮಂಡಳಿ, ಚುನಾವಣಾ ಪ್ರಚಾರ ಗೀತೆಯನ್ನು ಬಿಡುಗಡೆ ಮಾಡಿದೆ. ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ (ಮತ್ತೊಮ್ಮೆ ಮೋದಿ ಸರ್ಕಾರ) ಎಂಬುದು ಚುನಾವಣಾ ಪ್ರಚಾರ ಗೀತೆಯಾಗಿದೆ.
ಫಿರ್ ಏಕ್ ಬಾರ್ ಮೋದಿ ಸರ್ಕಾರ್ ಅನ್ನೋ ಚುನಾವಣಾ ಪ್ರಚಾರ ಗೀತೆಯನ್ನು ಕನ್ನಡ ಸೇರಿದಂತೆ 24 ಪ್ರಾದೇಶಿಕ ಭಾಷೆಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಮತ್ತೊಮ್ಮೆ ಮೋದಿ ಸರ್ಕಾರ ಎನ್ನುವ ಈ ಗೀತೆ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಪ್ರಚಾರ ಗೀತೆಯಾಗಿದೆ.
2014ರ ಜನವರಿ ತಿಂಗಳಲ್ಲಿ ಫಿಕ್ ಏಕ್ ಬಾರ್ ಮೋದಿ ಸರ್ಕಾರ ಅಭಿಯಾನಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಚಾಲನೆ ನೀಡಿದ್ದರು. ಈ ಅಭಿಯಾನದ ಅಡಿಯಲ್ಲಿ ಬಿಜೆಪಿ ನಾಯಕರು ದೇಶಾದ್ಯಂತ ಗೋಡೆಗಳಲ್ಲಿ ಫಿಕ್ ಏಕ್ ಬಾರ್ ಮೋದಿ ಸರ್ಕಾರ ಥೀಮ್ ಕುರಿತು ಪೈಟಿಂಗ್ ಮಾಡಿದ್ದಾರೆ. ಇದೀಗ ಈ ಅಭಿಯಾದ ಮುಂದುವರಿದ ಭಾಗವಾಗಿ ಫಿರ್ ಏಕ್ ಬಾರ್ ಮೋದಿ ಸರ್ಕಾರ ಚುನಾವಣಾ ಗೀತೆಯನ್ನು ಬಿಡುಗಡೆ ಮಾಡಲಾಗಿದೆ.