ಫೈಜರ್ ಲಸಿಕೆ ‘ಕೊರೊನಾ ವೈರಸ್ ವಿರುದ್ಧ 95% ಪರಿಣಾಮಕಾರಿ!

Prasthutha|

ಇಸ್ರೇಲ್ ನ ರಿಯಲ್ ವಲ್ಡ್ ಅಧ್ಯಯನ ವರದಿ

ಫೈಜರ್-ಬಯೋ ಎನ್ ಟೆಕ್ ಲಸಿಕೆಯ ಎರಡು ಡೋಸ್ ಗಳು ಕೋವಿಡ್ ನಿಂದ ಸೋಂಕು, ತೀವ್ರ ಅನಾರೋಗ್ಯ ಮತ್ತು ಸಾವಿನ ವಿರುದ್ಧ ಶೇಕಡಾ95 ಕ್ಕಿಂತ ಹೆಚ್ಚು ರಕ್ಷಣೆ ಯನ್ನು ಒದಗಿಸಬಹುದು ಎಂದು ಇಸ್ರೇಲ್ ನ ಅಧ್ಯಯನವು ತಿಳಿಸಿದೆ.

- Advertisement -

ಮಧ್ಯಪ್ರಾಚ್ಯ ದೇಶವು ಸದ್ಯ ತನ್ನ ಚುಚ್ಚುಮದ್ದು ಕಾರ್ಯಕ್ರಮದಲ್ಲಿ ಜಗತ್ತನ್ನು ಮುನ್ನಡೆಸುತ್ತದೆ, ಅದರ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು (ಶೇಕಡಾ56) ಈಗಾಗಲೇ ಫೈಜರ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದಿದೆ. ಜನವರಿಯಲ್ಲಿ, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಫೈಜರ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ,

ಇದು ದೊಡ್ಡ ಪ್ರಮಾಣದ ರಾಷ್ಟ್ರವ್ಯಾಪಿ ಆಧಾರದ ಮೇಲೆ ಲಸಿಕೆಯ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಮತ್ತು ವೈದ್ಯಕೀಯ ಪ್ರಯೋಗ ಪರಿಸ್ಥಿತಿಗಳ ಹೊರಗೆ ಫಲಿತಾಂಶಗಳನ್ನು ಗಳಿಸಲು ತಜ್ಞರಿಗೆ ಅವಕಾಶ ಮಾಡಿಕೊಟ್ಟಿದೆ.

- Advertisement -

ದಿ ಲ್ಯಾನ್ಸೆಟ್ ಜರ್ನಲ್ ನಲ್ಲಿ ಇಂದು ಪ್ರಕಟವಾದ ಸಂಶೋಧನೆಯು, ಲಸಿಕೆಯ ಒಂದು ಡೋಸ್ ಸೋಂಕಿನ ವಿರುದ್ಧ ಶೇಕಡಾ 58, ಆಸ್ಪತ್ರೆ ಪ್ರವೇಶದ ವಿರುದ್ಧ ಶೇಕಡಾ 76 ಮತ್ತು ಸಾವಿನ ವಿರುದ್ಧ ಶೇಕಡಾ 77 ರಷ್ಟು ರಕ್ಷಣೆ ನೀಡುತ್ತದೆ ಎಂದು ವರದಿ ನೀಡಿದೆ.

Join Whatsapp