Home ಟಾಪ್ ಸುದ್ದಿಗಳು ಫೈಝರ್‌ ಕೋವಿಡ್‌ ಲಸಿಕೆ ಜುಲೈನಲ್ಲಿ ಭಾರತಕ್ಕೆ ಪೂರೈಕೆಯಾಗಬಹುದು : ನೀತಿ ಆಯೋಗ

ಫೈಝರ್‌ ಕೋವಿಡ್‌ ಲಸಿಕೆ ಜುಲೈನಲ್ಲಿ ಭಾರತಕ್ಕೆ ಪೂರೈಕೆಯಾಗಬಹುದು : ನೀತಿ ಆಯೋಗ

ನವದೆಹಲಿ : ಕೋವಿಡ್‌ ಸಂಬಂಧಿತ ಫೈಝರ್‌ ಲಸಿಕೆ ಭಾರತದಲ್ಲಿ ನೀಡುವ ಬಗ್ಗೆ ಆ ಸಂಸ್ಥೆಯೊಂದಿಗೆ ಮಾತುಕತೆ ನಡೆಯುತ್ತಿದೆ. ಜುಲೈ ವೇಳೆಗೆ ಲಸಿಕೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್‌ ಹೇಳಿದ್ದಾರೆ.  

ಖಂಡಿತ, ನಾವು ಫೈಝರ್‌ ಜೊತೆಗೆ ಮಾತುಕತೆ ನಡೆಸುತ್ತಿದ್ದೇವೆ. ಮುಂಬರುವ ತಿಂಗಳಲ್ಲಿ, ಬಹುಶಃ ಜುಲೈಯಿಂದ ಆರಂಭಗೊಂಡು, ನಿರ್ದಿಷ್ಟ ಮೊತ್ತದ ಲಸಿಕೆ ಪೂರೈಕೆ ಮಾಡುವ ಬಗ್ಗೆ ಅವರು ಮುನ್ಸೂಚನೆ ನೀಡಿದ್ದಾರೆ ಎಂದು ಪೌಲ್‌ ತಿಳಿಸಿದ್ದಾರೆ.

ಅವರು ಭಾರತಕ್ಕೆ ಆಗಮಿಸಿ ಪರವಾನಿಗೆಗೆ ಅರ್ಜಿ ಹಾಕಬೇಕು. ಮಾತುಕತೆ ನಡೆಯುತ್ತಿದೆ. ಇಲ್ಲಿ ವರೆಗೆ ಈ ಬಗ್ಗೆ ಯಾವುದೇ ನಿರ್ಣಯವಾಗಿಲ್ಲ ಎಂದು ಪೌಲ್‌ ಸ್ಪಷ್ಟ ಪಡಿಸಿದ್ದಾರೆ.  

Join Whatsapp
Exit mobile version