►ಟೈಮ್ಸ್ ನೌ ಸಹಿತ ಹಲವು ಸುದ್ದಿವಾಹಿನಿಗಳ ಸುಳ್ಳು ಸುದ್ದಿ ತಳ್ಳಿಹಾಕಿದ ಪೊಲೀಸ್ ಇಲಾಖೆ
ಪುಣೆ: ಪಿಎಫ್ಐ ನಾಯಕರ ಬಂಧನವನ್ನು ವಿರೋಧಿಸಿ ಕೆಲವು ದಿನಗಳ ಹಿಂದೆ ಪುಣೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರು “ಪಾಕಿಸ್ತಾನ್ ಜಿಂದಾಬಾದ್” ಘೋಷಣೆಗಳನ್ನು ಕೂಗಿದ್ದರು ಎಂದು ಟೈಮ್ಸ್ ನೌ ಸಹಿತ ಹಲವು ಸುದ್ದಿವಾಹಿಗಳು ವರದಿ ಮಾಡಿದ್ದು ಇದನ್ನು ಪೊಲೀಸರು ಅಲ್ಲಗಳೆದಿದ್ದಾರೆ.
https://twitter.com/TimesNow/status/1573533227700060160?ref_src=twsrc%5Etfw%7Ctwcamp%5Etweetembed%7Ctwterm%5E1573533227700060160%7Ctwgr%5E535e2ccd42190ba61ccc26f59b319e0b23727203%7Ctwcon%5Es1_&ref_url=https%3A%2F%2Fwww.newslaundry.com%2F2022%2F09%2F24%2Fdid-pfi-protesters-shout-pakistan-zindabad-slogans-in-pune-police-say-no
ಸೆಪ್ಟೆಂಬರ್ 23 ರಂದು ಸಸೂನ್ ಆಸ್ಪತ್ರೆ ಬಳಿಯ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪಾಕ ಪರ ಈ ಪ್ರಚೋದನಕಾರಿ ಘೋಷಣೆಗಳನ್ನು ಕೂಗಲಾಗಿದೆ ಎಂದು ಟೈಮ್ಸ್ ನೌ ಹೇಳಿಕೊಂಡಿದ್ದು, ಎಎನ್ಐ, ರಿಪಬ್ಲಿಕ್, ನಯೀ ದುನಿಯಾ ಮತ್ತು ಲೋಕಮತ್ ಚಾನೆಲ್ ಗಳು ಇದೇ ಆರೋಪ ಮಾಡಿತ್ತು. ಆದರೆ ಪುಣೆ ಪೊಲೀಸರು ಈ ವರದಿ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.
इस घटना पर हुई मीडिया कवरेज। pic.twitter.com/Ss9XwvIY5A
— Shubhankar Mishra (@shubhankrmishra) September 24, 2022
ಪ್ರತಿಭಟನೆಯ ವೀಡಿಯೊಗಳನ್ನು ವೀಕ್ಷಿಸಿದ ಹಲವಾರು ಪೊಲೀಸ್ ಅಧಿಕಾರಿಗಳು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಪಿಎಫ್ಐ ಸದಸ್ಯರು “ಜಿಂದಾಬಾದ್, ಜಿಂದಾಬಾದ್, ಪಾಪ್ಯುಲರ್ ಫ್ರಂಟ್ ಜಿಂದಾಬಾದ್” ಎಂದು ಕೂಗುತ್ತಿದ್ದರೇ ಹೊರತು ಪಾಕಿಸ್ತಾನದ ಬಗ್ಗೆ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದರು.
ANI के मुताबिक़
— Shubhankar Mishra (@shubhankrmishra) September 24, 2022
कल PFI कार्यकर्ताओं द्वारा पाकिस्तान ज़िंदाबाद के नारे लगे थे जिसके बाद पुलिस में कुछ कार्यकर्ताओं को हिरासत में भी लिया था।
लेकिन Ambience के चलते नारों की स्पष्टता में समस्या है। हालाँकि मौक़े पर मौजूद संवाददाता जानकारी की पुष्टि करते हैं। pic.twitter.com/iGfb5Ajeus
ಯಾರೂ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗಲಿಲ್ಲ. ಇದು ಸಂಪೂರ್ಣ ಸುಳ್ಳು, . ಅವರ ಘೋಷಣೆ ‘ಪಾಪ್ಯುಲರ್ ಫ್ರಂಟ್ ಜಿಂದಾಬಾದ್’ ಎಂದಾಗಿತ್ತು ಎಂದು ಬಂಡ್ ಗಾರ್ಡನ್ ನ ಹಿರಿಯ ಪೊಲೀಸ್ ಇನ್ಸ್ಪೆಕ್ಟರ್ ಪ್ರತಾಪ್ ಮಾನಕರ್ ಹೇಳಿದರು. ಪ್ರತಿಭಟನೆ ನಡೆದ ಬಂಡ್ ಗಾರ್ಡನ್ನಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವ ಇನ್ನೊಬ್ಬ ಪೊಲೀಸ್ ಅಧಿಕಾರಿಯೂ ಸಹ ಇದು ಸಂಪೂರ್ಣ ಸುಳ್ಳು ಸುದ್ದಿ. ನಗರದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕದಡಲು ಕೆಲವು ಚಾನೆಲ್ ಗಳು ತಪ್ಪು ಮಾಹಿತಿಯನ್ನು ಹರಡುತ್ತಿವೆ. ನಾವು ಎಲ್ಲವನ್ನೂ ಸಂಪೂರ್ಣವಾಗಿ ಪರಿಶೀಲಿಸಿದ್ದೇವೆ. ಪ್ರತಿಭಟನಾಕಾರರು ಪಾಪ್ಯುಲರ್ ಫ್ರಂಟ್ ಪರವಾಗಿ ಘೋಷಣೆಗಳನ್ನು ಕೂಗುತ್ತಿದ್ದರೇ ಹೊರತು ಪಾಕಿಸ್ತಾನದ ಪರವಾಗಿ ಅಲ್ಲ ಎಂದು ಸ್ಪಷ್ಟಪಡಿಸಿದರು.
https://www.facebook.com/policenama/videos/1243470729528117/
ಪೊಲೀಸರು ಪ್ರತಿಭಟನೆಗೆ ಅನುಮತಿ ನೀಡಿರಲಿಲ್ಲ, ಆದರೆ ಜನರು ಇನ್ನೂ ಜಿಲ್ಲಾಧಿಕಾರಿಗಳ ಕಚೇರಿಯ ಹೊರಗೆ ಜಮಾಯಿಸಿದ್ದರು, ಪ್ರತಿಭಟನಾಕಾರರು ‘ಜಿಂದಾಬಾದ್, ಜಿಂದಾಬಾದ್, ಪಾಪ್ಯುಲರ್ ಫ್ರಂಟ್ ಜಿಂದಾಬಾದ್’ ಮತ್ತು ಕೆಲವರು ಅಲ್ಲಾಹು ಅಕ್ಬರ್ ಎಂದು ಕೂಗುತ್ತಿದ್ದರು. 10 ನಿಮಿಷಗಳ ನಂತರ, ಪೊಲೀಸರು ಸುಮಾರು 40 ಜನರನ್ನು ವಶಕ್ಕೆ ತೆಗೆದುಕೊಂಡು ಸಂಜೆ ತಡವಾಗಿ ಬಿಡುಗಡೆ ಮಾಡಿದರು. ಅಲ್ಲಿ ಪಾಕ್ ಪರ ಘೋಷಣೆ ಕೂಗಿದ ಯಾವುದೇ ದಾಖಲೆಗಳು ವರದಿಯಾಗಿಲ್ಲ ಎಂದು ಪೊಲೀಸರು ದೃಢಪಡಿಸಿದ್ದಾರೆ.