Home ಟಾಪ್ ಸುದ್ದಿಗಳು ಪಿಎಫ್ಐ ಹರತಾಳ: ಹೆಲ್ಮೆಟ್ ಧರಿಸಿ ಬಸ್ಸು ಚಲಾಯಿಸಿದ ಕೆಎಸ್ಆರ್ಟಿಸಿ ಚಾಲಕ: ವೀಡಿಯೋ ವೈರಲ್

ಪಿಎಫ್ಐ ಹರತಾಳ: ಹೆಲ್ಮೆಟ್ ಧರಿಸಿ ಬಸ್ಸು ಚಲಾಯಿಸಿದ ಕೆಎಸ್ಆರ್ಟಿಸಿ ಚಾಲಕ: ವೀಡಿಯೋ ವೈರಲ್

ಕೇರಳ: ಫಿಎಫ್ ಐ ಪ್ರತಿಭಟನೆ ಸಂದರ್ಭದಲ್ಲಿ ಕಲ್ಲು ತೂರಾಟಕ್ಕೆ ಮುಂಜಾಗ್ರತಾ ಕ್ರಮವಾಗಿ ಕೆಎಸ್ಆರ್ಟಿಸಿ ಚಾಲಕ ಹೆಲ್ಮೆಟ್ ಧರಿಸಿ  ಬಸ್ಸು ಚಲಾಯಿಸಿದ ವೀಡಿಯೊ ಇದೀಗ ವೈರಲ್ ಆಗಿದೆ

ಹರತಾಳದ ದಿನದಂದು ಕರ್ತವ್ಯ ನಿರ್ವಹಿಸುವುದು ಸಾರ್ವಜನಿಕ ಸಾರಿಗೆ ಕಾರ್ಮಿಕರಿಗೆ, ವಿಶೇಷವಾಗಿ ಸವಾಲಾಗಿದ್ದು, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಶುಕ್ರವಾರ ಕರೆ ನೀಡಿದ್ದ ಹರತಾಳ ತೀವ್ರಗೊಳ್ಳುತ್ತಿದ್ದಂತೆ ಸರ್ಕಾರಿ ಸ್ವಾಮ್ಯದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಆರ್ಟಿಸಿ) ಆಲುವಾ ಪ್ರದೇಶದ  ಬಸ್ ಚಾಲಕರೊಬ್ಬರು ಕಲ್ಲು ತೂರಾಟದಿಂದ ತಪ್ಪಿಸಿಕೊಳ್ಳಲು ಹೆಲ್ಮೆಟ್ ಧರಿಸಿದ್ದಾರೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಸೇರಿದಂತೆ ಕೇಂದ್ರೀಯ ಏಜೆನ್ಸಿಗಳುನ ಪಿಎಫ್ ಐ ಸಂಘಟನೆಯ ಹಿರಿಯ ನಾಯಕರನ್ನು ರಾಷ್ಟ್ರವ್ಯಾಪಿಯಾಗಿ ಬಂಧಿಸಿದ ನಂತರ ಕೇರಳದಲ್ಲಿ ಮುಂಜಾನೆಯಿಂದ ಮುಸ್ಸಂಜೆಯವರೆಗೆ ಹರತಾಳಕ್ಕೆ ಕರೆ ನೀಡಿದ  ಪ್ರತಿಭಟನಾಕಾರರು ಅನೇಕ ಕೆಎಸ್ಆರ್ಟಿಸಿ ಬಸ್ಗಳು ಮತ್ತು ಇತರ ವಾಹನಗಳ ಮೇಲೆ ದಾಳಿ ನಡೆಸಿದ ದಿನದಂದು ಹೆಲ್ಮೆಟ್ ಧರಿಸಿದ ಕೆಎಸ್ಆರ್ಟಿಸಿ ಉದ್ಯೋಗಿಯ ವೀಡಿಯೊ ವೈರಲ್ ಆಗಿದೆ.

ಕೈರಾಲಿ ನ್ಯೂಸ್ ಫೇಸ್ಬುಕ್ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಸಮವಸ್ತ್ರ ಧರಿಸಿದ ಬಸ್ ಚಾಲಕ ಹೆಲ್ಮೆಟ್ ಧರಿಸಿ ನಿರ್ಜನ ರಸ್ತೆಗಳಲ್ಲಿ ವಾಹನ ಚಲಾಯಿಸುತ್ತಿರುವುದನ್ನು ಕಾಣಬಹುದು

Join Whatsapp
Exit mobile version