ಪಾಪ್ಯುಲರ್ ಫ್ರಂಟ್ “ಬ್ಲಡ್ ಡೋನರ್ಸ್ ಫಾರಂ” ಲೋಗೊ ಬಿಡುಗಡೆ

Prasthutha|

ಮಾನವೀಯ ಸೇವೆಯನ್ನು ವ್ಯಾಪಕಗೊಳಿಸಲು ಕೈಜೋಡಿಸುವಂತೆ ರಾಜ್ಯಾಧ್ಯಕ್ಷ ಯಾಸಿರ್ ಹಸನ್ ಮನವಿ

- Advertisement -

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯು “ಬ್ಲಡ್ ಡೋನರ್ಸ್ ಫಾರಂ”ನ ಲೋಗೊ ವನ್ನು ರಾಜ್ಯಾಧ್ಯಕ್ಷರಾದ ಯಾಸಿರ್ ಹಸನ್ ಬೆಂಗಳೂರಿನ ರಾಜ್ಯ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.

- Advertisement -

ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಲೋಗೊ ಬಿಡುಗಡೆಗೊಳಿಸಿದ ಯಾಸಿರ್ ಹಸನ್ ಸುದ್ದಿಗಾರರೊಂದಿಗೆ ಮಾತನಾಡಿ, ರಕ್ತದಾನ ಮಹಾದಾನ ಎಂದು ಹೇಳಲಾಗುತ್ತಿದೆ.‌ ಆದರೆ ದುರದೃಷ್ಟವಶಾತ್ ಅಗತ್ಯ ಸಂದರ್ಭದಲ್ಲಿ ರಕ್ತವನ್ನು ಪೂರೈಸಲು ಹರಸಾಹಸ ಪಡುವಂತಹ ಸ್ಥಿತಿ 130ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ನಿರ್ಮಾಣವಾಗಿದೆ. ಸಮಾಜದಲ್ಲಿ ಸಾಕಷ್ಟು ರಕ್ತದ ಅವಶ್ಯಕತೆಯಿದೆ.‌ ಪಾಪ್ಯುಲರ್ ಫ್ರಂಟ್ ರಕ್ತದಾನಕ್ಕೆ ಬಹಳಷ್ಟು ಮಹತ್ವ ನೀಡಿದೆ ಮತ್ತು ತನ್ನ ಪ್ರಾರಂಭಿಕ ದಿನದಿಂದ ಹಿಡಿದು ಇಂದಿಗೂ ರಕ್ತದಾನ ಶಿಬಿರಗಳ ಮೂಲಕ ಮತ್ತು ತುರ್ತು ಸಂದರ್ಭಗಳಲ್ಲಿ ರಕ್ತವನ್ನು ನೀಡುವ ಮೂಲಕ ಜನರ ಜೀವ ಉಳಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ.

ಸಂಘಟನೆಯ ಮಾನವೀಯ ಸೇವೆಯನ್ನು ವ್ಯಾಪಕಗೊಳಿಸುವ ಉದ್ದೇಶದಿಂದ ಮತ್ತು ರಕ್ತದ ಕೊರತೆಯನ್ನು ನೀಗಿಸಲು, ಜನರಲ್ಲಿರುವ ಆತಂಕ-ಭಯವನ್ನು ದೂರ ಮಾಡುವ ಸಲುವಾಗಿ, ಜನರನ್ನು ರಕ್ತದಾನ ಮಾಡುವಂತೆ ಪ್ರೇರೇಪಿಸಲು ಮತ್ತು ಅವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ “ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ” ಸಂಸ್ಥೆಯನ್ನು ಸ್ಥಾಪಿಸಿದ್ದೇವೆ ಎಂದು ಯಾಸಿರ್ ಹಸನ್ ಹೇಳಿದ್ದಾರೆ.

ಸಾರ್ವಜನಿಕರೆಲ್ಲರೂ ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫಾರಂ ಜೊತೆಗೆ ಕೈ ಜೋಡಿಸುವ ಮೂಲಕ ಸಮಾಜದಲ್ಲಿರುವ ಮಾನವೀಯ ಬಿಕ್ಕಟ್ಟನ್ನು ಹೋಗಲಾಡಿಸಲು, ಜನತೆಯ ಜೀವ ಉಳಿಸುವ ಮಹತ್ಕಾರ್ಯದಲ್ಲಿ ಜೊತೆಯಾಗಬೇಕೆಂದು ಯಾಸಿರ್ ಹಸನ್ ವಿನಂತಿಸಿಕೊಂಡಿದ್ದಾರೆ. ‌

ಈ ಸಂದರ್ಭ ರಾಜ್ಯ ಕಾರ್ಯದರ್ಶಿ ಅಬ್ದುಲ್ ಮಜೀದ್, ಬ್ಲಡ್ ಡೋನರ್ಸ್ ಫಾರಂನ ಅಬೂ ಸಿನಾನ್ ಉಪಸ್ಥಿತರಿದ್ದರು.

Join Whatsapp