Home ಟಾಪ್ ಸುದ್ದಿಗಳು ಸಿದ್ದರಾಮಯ್ಯ ವಿರುದ್ಧ  ‘ಪಿಎಫ್ ಐ ಭಾಗ್ಯ’  ಪೋಸ್ಟರ್ 

ಸಿದ್ದರಾಮಯ್ಯ ವಿರುದ್ಧ  ‘ಪಿಎಫ್ ಐ ಭಾಗ್ಯ’  ಪೋಸ್ಟರ್ 

ಚಿತ್ರದುರ್ಗ: ಬಿಜೆಪಿಯ 40 % ಕಮಿಷನ್ ದಂಧೆಯ ಕುರಿತು ಕಾಂಗ್ರೆಸ್ ಪೇಸಿಎಂ ಪೋಸ್ಟರ್ ಅಭಿಯಾನದ ಬೆನ್ನಲ್ಲೇ ಸಿದ್ದರಾಮಯ್ಯ ವಿರುದ್ಧ  ಸಿದ್ರಾಮುಲ್ಲಾನ ಉಗ್ರಭಾಗ್ಯ ಹಾಗೂ ಲೀಲೆಗಳನ್ನು ತಿಳಿಯಲು ಸ್ಕ್ಯಾನ್ ಮಾಡಿ ಎಂಬ ಕ್ಯೂ ಆರ್ ಕೋಡ್ ಹೊಂದಿದ ಪೋಸ್ಟರ್ ಚಳ್ಳಕೆರೆ ನಗರದಲ್ಲಿ ಅಂಟಿಸಲಾಗಿದೆ.

ಭಾರತ್ ಜೋಡೊ ಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಈ ಪೋಸ್ಟರ್ ಕೆಳಗೆ ಸಿದ್ದರಾಮಯ್ಯ ಅವರ ಭಾವಚಿತ್ರದೊಂದಿಗೆ ‘ಪಿಎಫ್ ಐ ಭಾಗ್ಯ’ ಎಂದು ಬರೆದು ಅಂಟಿಸಲಾಗಿದೆ. ಸಿದ್ದರಾಮಯ್ಯ ಅವರು ಟಿಪ್ಪು ಸುಲ್ತಾನ್ ಪೇಟ ಧರಿಸಿ ಕೈಯಲ್ಲಿ ಖಡ್ಗ ಹಿಡಿದ ಚಿತ್ರ ಪೋಸ್ಟರ್ ಗಳಲ್ಲಿದೆ.

ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೊ ಯಾತ್ರೆಯ ಪ್ರಚಾರಕ್ಕೆ ಅಳವಡಿಸಿದ ಫ್ಲೆಕ್ಸ್, ಬ್ಯಾನರ್ ಅಡಿಯಲ್ಲಿ ಈ ಪೋಸ್ಟರ್ ಗಳು ಕಾಣಿಸಿಕೊಂಡಿದ್ದು, ಯಾತ್ರಗೆ ತಡೆ ಉಂಟುಮಾಡಲು ಬಿಜೆಪಿ ಈ ರೀತಿಯ ಪೋಸ್ಟರ್ ಅಂಟಿಸಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

Join Whatsapp
Exit mobile version