Home ಟಾಪ್ ಸುದ್ದಿಗಳು PFI ನಿಷೇಧ ಹಿನ್ನೆಲೆ; ಕೇರಳ PFI ರಾಜ್ಯ ಘಟಕ ವಿಸರ್ಜನೆ

PFI ನಿಷೇಧ ಹಿನ್ನೆಲೆ; ಕೇರಳ PFI ರಾಜ್ಯ ಘಟಕ ವಿಸರ್ಜನೆ

ಕೊಚ್ಚಿ: ಯುಎಪಿಎ ಕಾಯ್ದೆಯಡಿ ಕೇಂದ್ರ ಸರ್ಕಾರ ಪಿಎಫ್ಐ ಸಂಘಟನೆಯನ್ನು ನಿಷೇಧಿಸಿರುವ ಹಿನ್ನೆಲೆಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೇರಳ ರಾಜ್ಯ ಘಟಕವನ್ನು ವಿಸರ್ಜಿಸಲಾಗಿದೆ.

ಪಿಎಫ್ ಐಯನ್ನು ನಿಷೇಧಿಸಿ ಕೇಂದ್ರ ಗೃಹ ಇಲಾಖೆ ಅಧಿಸೂಚನೆ ಹೊರಡಿಸುವ ಹಿನ್ನೆಲೆಯಲ್ಲಿ ಕೇರಳ ಪಿಎಫ್ ಐ ಘಟಕವನ್ನು ವಿಸರ್ಜಿಸಿರುವುದಾಗಿ ಕೇರಳ ಪಿಎಫ್ ಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸತ್ತಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನಾವು ದೇಶದ ಕಾನೂನನ್ನು ಪಾಲಿಸುವ ನಾಗರಿಕರಾಗಿ, ಕೇಂದ್ರ ಸರ್ಕಾರದ ನಿರ್ಧಾರವನ್ನು ಒಪ್ಪಿಕೊಂಡು ನಮ್ಮ ಸಂಘಟನೆಯನ್ನು ವಿಸರ್ಜಿಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.

Join Whatsapp
Exit mobile version