ಮಹಾರಾಷ್ಟ್ರದಲ್ಲಿ ಅಖಿಲ ಭಾರತ ಇಮಾಮ್ ಕೌನ್ಸಿಲ್ ಮುಖ್ಯಸ್ಥರ ಬಂಧನ

ಮುಂಬೈ: ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧ ದಾಳಿಗಳು ನಡೆಯುತ್ತಿದ್ದು,  ನಾಸಿಕ್ ಪೊಲೀಸ್ ಅಪರಾಧ ವಿಭಾಗವು ಅಖಿಲ ಭಾರತ ಇಮಾಮ್ ಕೌನ್ಸಿಲ್ ನ ರಾಜ್ಯ ಮುಖ್ಯಸ್ಥ ಮೌಲಾನಾ ಇರ್ಫಾನ್ ದೌಲತ್ ನದ್ವಿ ಮತ್ತು ಸಂಘಟನೆಯ ಸದಸ್ಯರನ್ನು ಮಂಗಳವಾರ ಬಂಧಿಸಲಾಗಿದೆ.

ಥಾಣೆ, ನಾಸಿಕ್ ಮತ್ತು ಮಾಲೆಗಾಂವ್ ಸೇರಿದಂತೆ ರಾಜ್ಯದ ವಿವಿಧ ಸ್ಥಳಗಳಲ್ಲಿ ಕೇಂದ್ರ ಏಜೆನ್ಸಿ ಮತ್ತು ರಾಜ್ಯ ಭಯೋತ್ಪಾದನಾ ನಿಗ್ರಹ ದಳವು ದಾಳಿಗಳನ್ನು ನಡೆಸುತ್ತಿದೆ.

- Advertisement -

ಅಖಿಲ ಭಾರತ ಇಮಾಮ್ಸ್ ಕೌನ್ಸಿಲ್ ರಾಜ್ಯ ಮುಖ್ಯಸ್ಥ ಮೌಲಾನಾ ಇರ್ಫಾನ್ ದೌಲತ್ ನದ್ವಿ ಮತ್ತು ಪಿಎಫ್ಐ ಸದಸ್ಯ ರಶೀದ್ ಶಹದೀನ್ ಶಹೀದ್ ಇಕ್ಬಾಲ್ ಅವರನ್ನು ನಾಸಿಕ್ ಪೊಲೀಸ್ ಅಪರಾಧ ವಿಭಾಗ 151 ರ ಅಡಿಯಲ್ಲಿ ನಿನ್ನೆ ತಡರಾತ್ರಿ ವಶಕ್ಕೆ ಪಡೆದುಕೊಂಡಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಹೇಮಂತ್ ಪಾಟೀಲ್ ಮಂಗಳವಾರ ತಿಳಿಸಿದ್ದಾರೆ.