Home ಟಾಪ್ ಸುದ್ದಿಗಳು ಅಫ್ಘಾನಿಸ್ತಾನದಲ್ಲಿ ಪೆಟ್ರೋಲ್ ಅಗ್ಗವಿದೆ, ಪತ್ರಕರ್ತರಿಗೆ ಅಲ್ಲಿಗೆ ಹೋಗಿ ಎಂದ ಬಿಜೆಪಿ ಶಾಸಕ

ಅಫ್ಘಾನಿಸ್ತಾನದಲ್ಲಿ ಪೆಟ್ರೋಲ್ ಅಗ್ಗವಿದೆ, ಪತ್ರಕರ್ತರಿಗೆ ಅಲ್ಲಿಗೆ ಹೋಗಿ ಎಂದ ಬಿಜೆಪಿ ಶಾಸಕ

ಭೋಪಾಲ್: “ಅಫ್ಘಾನಿಸ್ತಾನದಲ್ಲಿ ಪೆಟ್ರೋಲ್ ಅಗ್ಗವಿದೆ. ನೀವು ಅಲ್ಲಿಗೆ ಹೋಗಿ ಹೋಗಿ” ಎಂದು ಪೆಟ್ರೋಲ್ ಬೆಲೆಯೇರಿಕೆಯನ್ನು ಪ್ರಶ್ನಿಸಿದ್ದಕ್ಕೆ ಪತ್ರಕರ್ತರೊಬ್ಬರಿಗೆ, ಮಧ್ಯಪ್ರದೇಶದ ಕಂತಿ ಜಿಲ್ಲೆಯ ಬಿಜೆಪಿ ಅಧ್ಯಕ್ಷ ಹಾಗೂ ಶಾಸಕ ರಾಮರತನ್ ಪಾಯಲ್ ಉತ್ತರ ನೀಡಿದ್ದಾರೆ. “ಅಫ್ಘಾನಿಸ್ತಾನಕ್ಕೆ ಹೋಗಿ. ಅಲ್ಲಿ ಪೆಟ್ರೋಲು ಬೆಲೆ ಲೀಟರಿಗೆ 50 ರೂಪಾಯಿ. ಅಲ್ಲಿ ಪೆಟ್ರೋಲು ಹಾಕಲಿಕ್ಕೆ ಯಾರೂ ಇರುವುದಿಲ್ಲ. ಇಲ್ಲಿ ನಾವು ಸುರಕ್ಷಿತರಾಗಿದ್ದೇವೆ. ಎರಡು ಅಲೆ ಎದುರಿಸಿದ್ದೇವೆ, ಇನ್ನೇನು ಮೂರನೆ ಕೊರೋನಾ ಅಲೆ ಎದುರಿಸಲು ನಾವು ತಯಾರಾಗಿದ್ದೇವೆ” ಎಂದು ರಾಮರತನ್ ಹೇಳಿದರು.


ಅವರ ಹೇಳಿಕೆಯ ವೀಡಿಯೋ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಈ ವೇಳೆ ಅವರ ಅನುಯಾಯಿಗಳು ಅವರನ್ನು ಸುತ್ತುವರಿದಿದ್ದರು. ಯಾರೊಬ್ಬರೂ ಮಾಸ್ಕ್ ಧರಿಸಿರಲಿಲ್ಲ ಹಾಗೂ ಯಾವುದೇ ಕೋವಿಡ್ ನಿಯಮ ಪಾಲಿಸಿರಲಿಲ್ಲ. “ನೀವು ಪತ್ರಕರ್ತರು ಸರಿಯಾಗಿ ನೋಡಿ, ಹೇಗೆ ಮೋದಿಯವರು ಕೊರೋನಾ ಪರಿಸ್ಥಿತಿಯನ್ನು ಹತೋಟಿಗೆ ತಂದರು. 80 ಕೋಟಿ ಜನರಿಗೆ ಮೋದಿಯವರು ಉಚಿತ ರೇಷನ್ ನೀಡುತ್ತಿದ್ದಾರೆ” ಎಂದು ರಾಮರತನ್ ಹೇಳಿದರು.


ಇತ್ತೀಚೆಗೆ ಬಿಹಾರದ ಬಿಜೆಪಿ ನಾಯಕ ಹರಿಭೂಷಣ್ ಠಾಕೂರ್ ಅವರು ಭಾರತದಲ್ಲಿ ಭಯದಿಂದ ಜೀವಿಸುವವರು ಅಫಘಾನಿಸ್ತಾನಕ್ಕೆ ಹೋಗಿ ಎಂದಿದ್ದರು.

Join Whatsapp
Exit mobile version