ಅಚ್ಛೇ ದಿನ್‌ | ಆಂಧ್ರ, ತೆಲಂಗಾಣದಲ್ಲೂ ಪೆಟ್ರೋಲ್‌ ಬೆಲೆ 100 ರೂ. ಗಡಿ ದಾಟಿತು!

Prasthutha|

ನವದೆಹಲಿ : ಪೆಟ್ರೋಲ್‌, ಡೀಸೆಲ್‌ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದ್ದರೂ, ಯಾರೊಬ್ಬರೂ ಇದರ ಬಗ್ಗೆ ಮಾತನಾಡುತ್ತಲೇ ಇದೆ. ಹಲವು ರಾಜ್ಯಗಳಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ ಗೆ 100 ರೂ. ಗಡಿ ದಾಟಿದ್ದರೆ, ಇದೀಗ ಆಂಧ್ರ ಪ್ರದೇಶ, ತೆಲಂಗಾಣದ ಕೆಲವು ಜಿಲ್ಲೆಗಳಲ್ಲಿ ಪೆಟ್ರೋಲ್‌ ಬೆಲೆ 100 ರೂ. ಗಡಿ ದಾಟಿದೆ. ಲೇಹ್‌ ನಲ್ಲೂ ಪೆಟ್ರೋಲ್‌ ಬೆಲೆ ಲೀಟರ್‌ ಗೆ 103.03 ರೂ. ಆಗಿದೆ.

ಆಂದ್ರಪ್ರದೇಶದ ವಿಶಾಖಪಟ್ಟಣ ಹೊರತುಪಡಿಸಿ, ಬಹುತೇಕ ಜಿಲ್ಲೆಗಳಲ್ಲಿ ಪೆಟ್ರೋಲ್‌ ಪ್ರತಿ ಲೀಟರ್‌ ಗೆ 100 ರೂ. ಗಡಿ ದಾಟಿದೆ. ತೆಲಂಗಾಣದ ಆದಿಲಾಬಾದ್‌ ನಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ ಗೆ 100.57 ರೂ. ಆಗಿದೆ, ನಿಜಾಮಾಬಾದ್‌ ನಲ್ಲಿ 100.17 ರೂ. ಆಗಿದೆ.

- Advertisement -

ಮಧ್ಯಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರದ ಬಳಿಕ ಈಗ ಬೇರೆ ರಾಜ್ಯಗಳಲ್ಲೂ ಪೆಟ್ರೋಲ್‌ ಬೆಲೆ 100ರೂ. ಗಡಿ ದಾಟುತ್ತಿದೆ. ಮಧ್ಯಪ್ರದೇಶದಲ್ಲಿ ರೂ.100ರ ಗಡಿ ದಾಟಿ ತಿಂಗಳುಗಳೇ ಆಗಿವೆ.

ಕರ್ನಾಟಕದಲ್ಲೂ, ಬಳ್ಳಾರಿಯಲ್ಲಿ ನಲ್ಲಿ 100 ರೂ. ಗಡಿ ದಾಟಲು ಇನ್ನು ಕೆಲವೇ ಪೈಸೆಗಳು ಬಾಕಿಯಿವೆ. ಬಳ್ಳಾರಿಯಲ್ಲಿ ಪೆಟ್ರೋಲ್‌ ಬೆಲೆ ಲೀಟರ್‌ ಗೆ 99.83 ರೂ. ಆಗಿದೆ.

- Advertisement -