ಅಚ್ಛೇ ದಿನ್ ! | ಮ.ಪ್ರ.ದಲ್ಲಿ ಪೆಟ್ರೋಲ್ ಬೆಲೆ 100 ರೂ. ಗಡಿ ತಲುಪಲು 38 ಪೈಸೆ ಮಾತ್ರ ಬಾಕಿ!

Prasthutha|

ನವದೆಹಲಿ : ಪೆಟ್ರೋಲ್, ಡೀಸೆಲ್ ಬೆಲೆ ಇಂದೂ ಏರಿಕೆಯಾಗಿದೆ. ದೇಶಾದ್ಯಂತ ಇಂಧನ ಬೆಲೆ ಏರಿಕೆಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದರೂ, ‘ಅಚ್ಛೇ ದಿನ್’ ತರುವುದಾಗಿ ಅಧಿಕಾರಕ್ಕೆ ಬಂದಿರುವ ಸರಕಾರಗಳು ಮಾತ್ರ ಏನೂ ಆಗಿಲ್ಲ ಎಂಬಂತೆ ಸುಮ್ಮನಿವೆ. ಪ್ರತಿಪಕ್ಷಗಳೂ ಈ ಬಗ್ಗೆ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತದಿರುವುದು ಹಲವು ಅನುಮಾನಗಳಿಗೂ ಕಾರಣವಾಗಿದೆ.

- Advertisement -

ಸತತ ಎಂಟು ದಿನಗಳಿಂದ ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಸಾಗಿದೆ. ಮಧ್ಯಪ್ರದೇಶದ ಬಹುತೇಕ ನಗರಗಳಲ್ಲಿ ಪೆಟ್ರೋಲ್ ಗೆ ಲೀಟರ್ ಗೆ 99 ರೂ. ಗಡಿ ದಾಟಿದೆ. ಮಧ್ಯಪ್ರದೇಶದ ಅನುಪುರದಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 100 ರೂ. ಗಡಿ ತಲುಪಲು ಇನ್ನು 38 ಪೈಸೆ ಮಾತ್ರ ಬಾಕಿಯಿದೆ. ಇದೇ ರೀತಿ ಮುಂದುವರಿದರೆ ಸಾಮಾನ್ಯ ಪೆಟ್ರೋಲ್ ಗೇ ಇನ್ನೊಂದೆರಡು ದಿನಗಳಲ್ಲಿ ಇಲ್ಲಿ ಲೀಟರ್ ಗೆ 100 ಗಡಿ ತಲುಪಲಿದೆ.

ಮಹಾರಾಷ್ಟ್ರದಲ್ಲಿ ಮುಂಬೈಯಲ್ಲಿ ಪೆಟ್ರೋಲ್ ದರ 96 ರೂ. ಗಡಿ ಸಮೀಪಿಸುತ್ತಿದೆ. ಅಲ್ಲಿನ ಇತರ ಕೆಲವು ನಗರಗಳಲ್ಲಿ ಪೆಟ್ರೋಲ್ ಬೆಲೆ 97 ರೂ. ಗಡಿ ಈಗಾಗಲೇ ದಾಟಿದೆ. ಮುಂಬೈಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 95.75 ಮತ್ತು ಡೀಸೆಲ್ ಬೆಲೆ 86.72 ರೂ. ಆಗಿದೆ.

- Advertisement -

ಬೆಂಗಳೂರಿನಲ್ಲಿ ಪೆಟ್ರೋಲ್ ಗೆ 92.82 ಮತ್ತು ಡೀಸೆಲ್ ಗೆ 84.49 ರೂ. ಆಗಿದೆ. ಕರ್ನಾಟಕದಲ್ಲಿ ಬಳ್ಳಾರಿಯಲ್ಲಿ ಇಂದಿನ ಪೆಟ್ರೋಲ್ ಬೆಲೆ 94.02 ರೂ. ಆಗಿದೆ. ಚಿತ್ರದುರ್ಗದಲ್ಲಿ 93.82 ರೂ. ಆಗಿದೆ. ದಾವಣಗೆರೆಯಲ್ಲಿ 93.47 ರೂ., ಚಿತ್ರದುರ್ಗದಲ್ಲಿ 93.82 ರೂ., ಶಿವಮೊಗ್ಗ 93.49 ರೂ. ಆಗಿದೆ.

Join Whatsapp