ನವದೆಹಲಿ: ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರವು ಲೀಟರಿಗೆ 50 ಪೈಸೆಯಷ್ಟು ಹೆಚ್ಚಳವಾಗಿದೆ. ಈ ಮೂಲಕ
ಕಳೆದ ಆರು ದಿನಗಳಲ್ಲಿ ಐದು ಬಾರಿ ತೈಲ ದರದಲ್ಲಿ ಏರಿಕೆ ಕಂಡುಬಂದಿದೆ. ಪ್ರತಿ ಲೀಟರಿಗೆ 3.70ರಷ್ಟು ಹೆಚ್ಚಿಸಿದಂತಾಗಿದೆ.
ದರ ಹೆಚ್ಚಳದಿಂದಾಗಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ಲೀಟರಿಗೆ 99.11 ಹಾಗೂ ಡೀಸೆಲ್ ಬೆಲೆಯು 90.42ಕ್ಕೆ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯು 104.41 ಹಾಗೂ ಡೀಸೆಲ್ ಬೆಲೆಯು 88.12ಕ್ಕೆ ತಲುಪಿದೆ.