ಮಧುರೈ: ಅಪರಿಚಿತರು ಆರ್ ಎಸ್ ಎಸ್ ಮುಖಂಡರೊಬ್ಬರ ಮನೆ ಮೇಲೆ ಪೆಟ್ರೋಲ್ ಬಾಂಬ್ ಎಸೆದಿರುವ ಘಟನೆ ಶನಿವಾರ ರಾತ್ರಿ ಮಧುರೈನ ಮೇಳ ಅನುಪ್ಪನದಿ ಎಂಬಲ್ಲಿ ನಡೆದಿದೆ.
ಎಂ.ಎಚ್.ಕೃಷ್ಣನ್ ಎಂಬವರ ಮನೆ ಮೇಲೆ ಇಬ್ಬರು ಅಪರಿಚಿತ ಕಿಡಿಗೇಡಿಗಳು ಮೂರು ಪೆಟ್ರೋಲ್ ಬಾಂಬ್ ಗಳನ್ನು ಎಸೆದಿದ್ದಾರೆ. ದಾಳಿಯ ವೇಳೆ ಕೃಷ್ಣನ್ ಹಾಗೂ ಕುಟುಂಬ ಸದಸ್ಯರು ಮನೆಯೊಳಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಯಾರೂ ಕೂಡ ಗಾಯಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ದಾಳಿಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.