Home ಟಾಪ್ ಸುದ್ದಿಗಳು ಮಂಗಳೂರು ಸಿಟಿ ಬಸ್ ನಿಲ್ದಾಣ ಸ್ಥಳಾಂತರದ ಬಗ್ಗೆ ಮಾಜಿ MLC ಐವಾನ್ ಡಿಸೋಜ ಅವರಿಗೆ ಮನವಿ...

ಮಂಗಳೂರು ಸಿಟಿ ಬಸ್ ನಿಲ್ದಾಣ ಸ್ಥಳಾಂತರದ ಬಗ್ಗೆ ಮಾಜಿ MLC ಐವಾನ್ ಡಿಸೋಜ ಅವರಿಗೆ ಮನವಿ ಸಲ್ಲಿಸಿದ ವ್ಯಾಪಾರಸ್ಥರು

ಮಂಗಳೂರು : ಸಿಟಿ ಬಸ್ ನಿಲ್ದಾಣ ಸ್ಥಳಾಂತರದ ಬಗ್ಗೆ ಮಾಜಿ MLC ಐವಾನ್ ಡಿಸೋಜ ಅವರಿಗೆ ಸ್ಥಳೀಯ ಸ್ಟೇಟ್ ಬ್ಯಾಂಕ್ ವ್ಯಾಪಾರಸ್ಥರು ಮನವಿ ಸಲ್ಲಿಸಿದ್ದಾರೆ.

ನಗರದ ಸ್ಟೇಟ್ ಬ್ಯಾಂಕ್ ಬಳಿ ಇರುವ ಸಿಟಿ ಬಸ್ ನಿಲ್ದಾಣವನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಬೇಕು ಎಂಬುದು ಸ್ಟೇಟ್ ಬ್ಯಾಂಕ್ ಪರಿಸರದ ವ್ಯಾಪಾರಸ್ಥರ ಬೇಡಿಕೆಯಾಗಿದೆ.

ಸಿಟಿ ಬಸ್ ನಿಲ್ದಾಣವನ್ನು ಸ್ಥಳಾಂತರಿಸಿರುವುದರಿಂದ ನಮಗೆ ಶೇ.15ರಷ್ಟು ಕೂಡ ವ್ಯಾಪಾರ ಆಗುತ್ತಿಲ್ಲ. ವ್ಯಾಪಾರವಿಲ್ಲದೆ ನಷ್ಟ ಅನುಭವಿಸುತ್ತಿದ್ದು, ಕಟ್ಟಡದ ಬಾಡಿಗೆ ಕೂಡ ಪಾವತಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಬಸ್ ನಿಲ್ದಾಣವನ್ನು ಈ ಹಿಂದಿನಂತೆಯೇ ಮುಂದುವರಿಸಬೇಕು ಎಂದು ವ್ಯಾಪಾರಸ್ಥರು ಅವಲತ್ತುಕೊಂಡಿದ್ದಾರೆ.

ಕಳೆದ 50ರಿಂದ 60 ವರ್ಷಗಳಿಂದ ಇಲ್ಲಿ ರಸ್ತೆ ಬದಿಯೇ ಬಸ್ ಗಳನ್ನು ನಿಲ್ಲಿಸಲಾಗುತ್ತಿತ್ತು. ಈಗ ಏಕಾಏಕಿ ಬದಲಾಯಿಸಿರುವುದರಿಂದ ವ್ಯಾಪಾರಸ್ಥರು ಜೀವನ ನಡೆಸಲು ಕಷ್ಟವಾಗಿದೆ. ಸದ್ಯ ಸರ್ವೀಸ್ ಬಸ್ ನಿಲ್ದಾಣಕ್ಕೆ ಸ್ಥಳಾಂತರಿಸಿದ ಬಸ್ ನಿಲ್ದಾಣದಲ್ಲಿ ಮೂಲಭೂತ ಸೌಕರ್ಯ ಇಲ್ಲ. ರಾವ್ ಆ್ಯಂಡ್ ರಾವ್ ವೃತ್ತ ಮತ್ತು ಸರ್ವೀಸ್ ಬಸ್ ನಿಲ್ದಾಣ ಈ ಎರಡೂ ಕಡೆಯಿಂದ ಒಟ್ಟಾಗಿ ಬಸ್ ಹೊರಡುವುದರಿಂದ ವಾಹನ ದಟ್ಟಣೆಯೂ ಹೆಚ್ಚಾಗುತ್ತಿದೆ.

ಸ್ಟೇಟ್ ಬ್ಯಾಂಕ್ ಬಳಿ ಸಿಟಿ ಬಸ್ ನಿಲ್ದಾಣ ಬಂದರೆ ಯಾವುದೇ ಟ್ರಾಫಿಕ್ ಸಮಸ್ಯೆ ಉಂಟಾಗುವುದಿಲ್ಲ. ಈಗ ಇಲ್ಲಿನ ರಸ್ತೆಯೂ ಅಗಲವಾಗಿದ್ದು, ಸಮರ್ಪಕ ಬಸ್ ಶೆಲ್ಟರ್ ನಿರ್ಮಾಣದ ಭರವಸೆಯನ್ನೂ ಸ್ಥಳೀಯಾಡಳಿತ ನೀಡಿದೆ. ಯಾವುದೇ ಸರ್ವೇ, ಸಾರ್ವಜನಿಕರ ಅಭಿಪ್ರಾಯ ಪಡೆಯದೆ ಬಸ್ ನಿಲ್ದಾಣ ಸ್ಥಳಾಂತರ ಸರಿಯಲ್ಲ. ಈ ಕುರಿತಂತೆ ಈಗಾಗಲೇ ಸ್ಥಳೀಯಾಡಳಿತ, ಜಿಲ್ಲಾಡಳಿತ, ಸ್ಮಾರ್ಟ್‌ ಸಿಟಿ ಸೇರಿದಂತೆ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದೇವೆ. ಕೂಡಲೇ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಅಲ್ಲಿನ ವ್ಯಾಪಾರಸ್ಥರೊಬ್ಬರು ತಿಳಿಸಿದ್ದಾರೆ.

Join Whatsapp
Exit mobile version