Home ರಾಜ್ಯ ಸಾಮಾಜಿಕ ಹೊಣೆಗಾರಿಕೆಯಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯ: ಬಸವರಾಜ ಬೊಮ್ಮಾಯಿ

ಸಾಮಾಜಿಕ ಹೊಣೆಗಾರಿಕೆಯಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯ: ಬಸವರಾಜ ಬೊಮ್ಮಾಯಿ

ತುಮಕೂರು: ಸಾಮಾಜಿಕ ಹೊಣೆಗಾರಿಕೆಯಲ್ಲಿ ಜನರ ಸಹಭಾಗಿತ್ವ ಬಹಳ ಮುಖ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಪಡಿಸಿರುವ ಆಲದ ಮರದ ಪಾರ್ಕ್ ನ ನಿರ್ವಹಣಾ ಜವಾಬ್ದಾರಿಯನ್ನು ತುಮಕೂರಿನ ಪ್ರೆಸ್ ಕ್ಲಬ್ ಇವರಿಗೆ ಹಸ್ತಾಂತರಿಸಿ ಮಾತನಾಡಿದರು.


ಈ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಪಾರ್ಕ್ ನಿರ್ವಹಣೆಯ ಹೊಣೆಯನ್ನು ಪ್ರೆಸ್ ಕ್ಲಬ್ ಹೊತ್ತಿರುವುದು ದಿಟ್ಟ ಹೆಜ್ಜೆಯಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 65 ಲಕ್ಷ ರೂ.ಗಳನ್ನು ಇದಕ್ಕೆ ವೆಚ್ಚ ಮಾಡಲಾಗುತ್ತಿದೆ. ಸ್ಮಾರ್ಟ್ ಸಿಟಿ ಕೆಲಸವೂ ಉತ್ತಮವಾಗಿ ಆಗುತ್ತಿದೆ. ಉದ್ಯಾನವನವನ್ನು ಪ್ರಸ್ ಕ್ಲಬ್ ಗೆ ನೀಡಿರುವುದು ವಿನೂತನ ಕಾರ್ಯಕ್ರಮ. ಪ್ರೆಸ್ ಕ್ಲಬ್ ನವರ ಸಾಮಾಜಿಕ ಹೊಣೆಗಾರಿಕೆ ಹಾಗೂ ಪರಿಸರದ ಮೇಲಿನ ಪ್ರೀತಿ ಎದ್ದು ಕಾಣುತ್ತಿದೆ. ಇದನ್ನು ನಿರ್ವಹಣೆ ಮಾಡುವಾಗ ಬಹಳಷ್ಟು ಸಮಸ್ಯೆಗಳು ತನ್ನಿಂದ ತಾನೇ ಬಗೆಹರಿಯುತ್ತವೆ ಎಂದು ಮುಖ್ಯಮಂತ್ರಿಗಳು ತಿಳಿದರು.


ಆಲದ ಮರ ಪಾರ್ಕ್ ತುಮಕೂರಿನಲ್ಲಿ ಬಹಳ ಪ್ರಸಿದ್ಧ. ಹಲವಾರು ವರ್ಷಗಳಿಂದ ಇದನ್ನು ಕಾಪಾಡಿಕೊಂಡು ಬಂದಿದ್ದಾರೆ. ತುಮಕೂರು ನಗರ ಕಲ್ಪತರು ನಾಡು. ಇಲ್ಲಿನ ಮಣ್ಣು, ನೀರು ಶಕ್ತಿಯುತವಾಗಿರುವುದರಿಂದ ಅದ್ಭುತವಾದ ಫಲ ದೊರೆಯುತ್ತದೆ. ಈ ನಾಡಿನಲ್ಲಿ ಇಂಥ ಉದ್ಯಾನವನವನ್ನು ಉಳಿಸಿಕೊಂಡು ಬಂದಿರುವುದು ಉತ್ತಮ ಕೆಲಸ. ತುಮಕೂರಿನ ಕಾರ್ಪೋರೇಷನ್ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು, ಶಾಸಕರು ಇದನ್ನು ಹಸ್ತಾಂತರಿಸಲು ಒಪ್ಪಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ ಎಂದರು.


ಈ ಬಾರಿಯ ಬಜೆಟ್ನಥಲ್ಲಿಯೂ ಪರಿಸರಕ್ಕೆ ಮಹತ್ವ ನೀಡಲಾಗಿದೆ. ಪ್ರಥಮ ಬಾರಿಗೆ ಪರಿಸರ ಆಯವ್ಯಯವನ್ನು ರೂಪಿಸಲಾಗಿದೆ. ಒಂದು ವರ್ಷದಲ್ಲಿ ಉಂಟಾಗುವ ಪರಿಸರ ನಷ್ಟದ ಪರಿಶೋಧನೆ ಮಾಡಿ, ಅರಣ್ಯ ಪ್ರದೇಶದ ಸಮತೋಲನ ಕಾಯ್ದುಕೊಳ್ಳಲು ಕ್ರಮ ವಹಿಸಲಾಗುತ್ತಿದೆ. ಆಗ ಮಾತ್ರ ಕರ್ನಾಟಕ ಉತ್ತಮ ಪರಿಸರವುಳ್ಳ ನಾಡಾಗುತ್ತದೆ. ಪಶ್ಚಿಮ ಘಟ್ಟಗಳು ನಮಗೆ ನಿಸರ್ಗದ ದೊಡ್ಡ ಕೊಡುಗೆ. ಪರಿಸರ ಉಳಿಸುವ ಕೆಲಸ ಆಗಲಿ ಎಂದರು.

Join Whatsapp
Exit mobile version