Home ಟಾಪ್ ಸುದ್ದಿಗಳು ಬಿಜೆಪಿಗೆ ದೇಶದ ಜನತೆ ಕಪಾಳಮೋಕ್ಷ ಮಾಡಿದ್ದಾರೆ: ಅಫ್ಸರ್ ಕೊಡ್ಲಿಪೇಟೆ

ಬಿಜೆಪಿಗೆ ದೇಶದ ಜನತೆ ಕಪಾಳಮೋಕ್ಷ ಮಾಡಿದ್ದಾರೆ: ಅಫ್ಸರ್ ಕೊಡ್ಲಿಪೇಟೆ

ಶಹಾಪುರ: ದೇಶದಲ್ಲಿ ಬಾಬಾ ಸಾಹೇಬರ ಸಂವಿಧಾನವನ್ನು ರದ್ದು ಮಾಡುವ ಮೂಲಕ ಪ್ರಜಾಪ್ರಭುತ್ವವನ್ನು ಅಂತ್ಯಗೊಳಿಸಿ ಸರ್ವಾಧಿಕಾರವನ್ನು ಬಿಗಿಗೊಳಿಸಲು ಹೊರಟಿದ್ದ ಬಿಜೆಪಿಯ ಸಂಚಿಗೆ ದೇಶದ ಜನತೆ ಚುನಾವಣೆಯಲ್ಲಿ ಸರಿಯಾಗೆ ಕಪಾಳಮೋಕ್ಷ ಮಾಡಿದ್ದಾರೆ. ಮೋದಿ ಸರ್ಕಾರವನ್ನು ಜನತೆ ಸರಳ ಬಹುಮತಕ್ಕೆ ಬೇಕಾದ 272 ಸ್ಥಾನಗಳನ್ನೂ ನೀಡದೆ ಕೇವಲ 240 ಸ್ಥಾನಗಳನ್ನು ನೀಡಿ ಬಿಜೆಪಿ ಮತ್ತು ಮೋದಿಯವರ ದುರಾಡಳಿತವನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂದು ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಫ್ಸರ್ ಕೊಡ್ಲಿಪೇಟೆ ಹೇಳಿದ್ದಾರೆ.

ಶಹಾಪುರ ನಗರ ವ್ಯಾಪ್ತಿಯ ಕಾರ್ಯಕರ್ತರ ಸಮಾವೇಶಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಅಫ್ಸರ್ ಕೊಡ್ಲಿಪೇಟೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

2024 ರ ಲೋಕಸಭಾ ಚುನಾವಣೆಗಳ ಫಲಿತಾಂಶಗಳು ದೇಶಕ್ಕೆ ಹೊಸ ಭರವಸೆಯನ್ನು ನೀಡಿವೆ. ಇಂತಹ ಫಲಿತಾಂಶಕ್ಕೆ ಕಾರಣರಾದ ದೇಶದ ಜನತೆಗೆ ಧನ್ಯವಾದ ಮತ್ತು ಅಭಿನಂದನೆಗಳು. ಅದರಲ್ಲೂ ಉತ್ತರ ಪ್ರದೇಶದ ಜನತೆ ಪ್ರಜಾಪ್ರಭುತ್ವ ವಿರೋಧಿ ಬುಲ್ಡೋಜರ್ ಸಂಸ್ಕೃತಿಯನ್ನು ನೆಲಕಚ್ಚಿಸಿದ್ದಾರೆ. ಅಲ್ಲಿನ 80 ಲೋಕಸಭಾ ಕ್ಷೇತ್ರಗಳ ಪೈಕಿ 47 ಸ್ಥಾನಗಳಲ್ಲಿ ಬಿಜೆಪಿಯನ್ನು ಸೋಲಿಸಿದ್ದಾರೆ. ಈ ಮೂಲಕ ಬುಲ್ಡೋಜರ್ ಬಳಸಿ ಅಸಹಾಯಕರ, ಅಲ್ಪಸಂಖ್ಯಾತರ, ಮತ್ತು ಬಡವರ ಮನೆಗಳನ್ನು ನಾಶ ಮಾಡುತ್ತಿದ್ದ ಆದಿತ್ಯನಾಥ್‌ಗೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.

ಇಷ್ಟಾದರೂ ಕೋಮುವಾದಿ ಬಿಜೆಪಿ ಉಸಿರಾಡಲು ಇನ್ನೂ ಸ್ವಲ್ಪ ಮಟ್ಟಿನ ಅವಕಾಶ ಉಳಿದಿರುವುದು ಜಾತ್ಯಾತೀತ ಎಂದು ಕರೆಸಿಕೊಳ್ಳುವ ಪಕ್ಷಗಳ ಸ್ವಾರ್ಥದ ಕಾರಣಕ್ಕೆ. ಜಾತ್ಯಾತೀತ ಮತ್ತು ಪ್ರಾದೇಶಿಕ ಪಕ್ಷಗಳು ಇನ್ನಾದರೂ ತಮ್ಮ ಸ್ವಾರ್ಥ ಮತ್ತು ಹಮ್ಮನ್ನು ಬದಿಗೆ ಸರಿಸಿ ತ್ಯಾಗದ ಮನೋಭಾವ ತೋರಬೇಕು. ಆ ಮೂಲಕ ಎಲ್ಲರೂ ಒಟ್ಟಾಗಿ ಸೇರಿ ಬಿಜೆಪಿಯೇತರ ಸರ್ಕಾರ ರಚನೆಯಾಗುವಂತೆ ನೋಡಿಕೊಳ್ಳಬೇಕಿದೆ. ನಮ್ಮ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ಎಲ್ಲರೂ ತ್ಯಾಗ ಮಾಡಬೇಕಿದೆ ಎಂದು ಎಸ್ಡಿಪಿಐ ನಾಯಕ ಕರೆ ಕರೆಕೊಟ್ಟಿರು.

ವೇದಿಕೆಯಲ್ಲಿ ರಾಜ್ಯ ಖಜಾಂಚಿ ಇಸಾಕ್ ಹುಸೇನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಜಾನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಝಮೀರ್, ನಗರ ಸಭಾ ಸದಸ್ಯ ಚುನ್ನುಮಿಯ್ಯಾ ಉಪಸ್ಥಿತರಿದ್ದರು.

Join Whatsapp
Exit mobile version