ರಾಂಚಿ: ಸಂದೇಶ್‌ಖಾಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದಿಂದ ಇಡೀ ದೇಶವೇ ಕ್ರೋಧದಿಂದ ಕುದಿಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಶುಕ್ರವಾರ ಟಿಎಂಸಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದ್ದು, ಸಂದೇಶ್‌ಖಾಲಿ ಪ್ರಕರಣ ಸಂಬಂಧ ಮೌನ ವಹಿಸಿರುವ ಇಂಡಿಯಾ ಒಕ್ಕೂಟವನ್ನೂ ತರಾಟೆಗೆ ತೆಗೆದುಕೊಂಡಿದಿದ್ದಾರೆ
ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಮೋದಿ, ಬಂಗಾಳದ ಜನರು ತಮಗಾದ ಗಾಯಕ್ಕೆ ಮತಗಳ ಮೂಲಕ ಉತ್ತರ ನೀಡಲಿದ್ದಾರೆ ಎಂದು ಹೇಳುವ ಮೂಲಕ ಚುನಾವಣಾ ಕಹಳೆಯನ್ನು ಮೊಳಗಿಸಿದ್ದಾರೆ.
“ಮಾ, ಮಾತಿ, ಮಾನುಷ’ ಎಂದು ಎದೆ ತಟ್ಟಿಕೊಳ್ಳುವ ಟಿಎಂಸಿ ಸಂದೇಶ್‌ಖಾಲಿ ದೌರ್ಜ ನ್ಯವನ್ನು ಇಡೀ ದೇಶವು ಆಕ್ರೋಶದಿಂದ ನೋಡುತ್ತಿದೆ ಎಂದರು. ಇದಕ್ಕೂ ಮುನ್ನ ಜಾರ್ಖಂಡ್‌ನಲ್ಲಿ 35,700 ಕೋಟಿ ರೂ.ಯೋಜನೆಗಳಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ.
ಬಡತನದಿಂದ 25 ಕೋಟಿ ಜನ ಪಾರು: ಪ್ರಧಾನಿ ಮೋದಿ
ಕಳೆದ 10 ವರ್ಷಗಳಲ್ಲಿ 25 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ. ಇದು ಸರ್ಕಾರದ ಉದ್ದೇಶವು ಸರಿಯಾಗಿದೆ ಎಂಬುದನ್ನು ಸಾಬೀತುಪಡಿಸಿದೆ. ನಮ್ಮ ಸರ್ಕಾರ ಸಾಗುತ್ತಿರುವ ದಾರಿ, ಕೈಗೊಳ್ಳುತ್ತಿ ರುವ ನೀತಿಗಳು, ನಿರ್ಧಾರಗಳು ಮತ್ತು ಮುಖ್ಯವಾಗಿ ನಮ್ಮ ಉದ್ದೇಶವು ಸರಿ ಯಾಗಿದೆ ಎಂಬುದನ್ನು ಈ ಸಾಧನೆ ಸಾದರ ಪಡಿಸುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.