Home ಟಾಪ್ ಸುದ್ದಿಗಳು ಸಮಾಜದ ಶಾಂತಿ ಕದಡಲು ಬೇಕಾಗಿಯೇ ಪ್ರತಾಪ್ ಸಿಂಹನಂಥವರು ಹುಟ್ಟಿಕೊಂಡಿದ್ದಾರೆ: ಸಿದ್ದರಾಮಯ್ಯ ಕಿಡಿ

ಸಮಾಜದ ಶಾಂತಿ ಕದಡಲು ಬೇಕಾಗಿಯೇ ಪ್ರತಾಪ್ ಸಿಂಹನಂಥವರು ಹುಟ್ಟಿಕೊಂಡಿದ್ದಾರೆ: ಸಿದ್ದರಾಮಯ್ಯ ಕಿಡಿ

ಮೈಸೂರು: ಸಮಾಜದ ಶಾಂತಿ ಕದಡಲು ಬೇಕಾಗಿಯೇ ಪ್ರತಾಪ್ ಸಿಂಹನಂಥವರು ಹುಟ್ಟಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಂಬಜ್ ಮಾದರಿಯಲ್ಲಿ ನಿರ್ಮಾಣವಾಗಿರುವ ಬಸ್ ತಂಗುದಾಣದ ಕಟ್ಟಡಗಳನ್ನು ಒಡೆದು ಹಾಕೋಕೆ ಇವನ್ಯಾರು..? ಇವನ ದುಡ್ಡಲ್ಲಿ ಕಟ್ಟಿಸಿದ್ನಾ? ಅದು ಸಾರ್ವಜನಿಕರ ದುಡ್ಡಲ್ಲಿ ಕಟ್ಟಿಸಿರೋದು ಎಂದು ವಾಗ್ದಾಳಿ ನಡೆಸಿದರು.


600 ವರ್ಷಗಳ ಕಾಲ ದೇಶವನ್ನು ಮೊಘಲರು ಆಳುವಾಗ ಇವರೆಲ್ಲಾ ಎಲ್ಲಿದ್ದರು? ಪ್ರತಾಪ್ ಸಿಂಹ ಎರಡು ಬಾರಿ ಸಂಸದನಾಗಿದ್ದಾನೆ. ಆತನಿಗೆ ಕಾಮನ್ ಸೆನ್ಸ್ ಇಲ್ವಾ..? ಇಂಥಾ ವಿಚಾರಗಳನ್ನು ಇಟ್ಟುಕೊಂಡು ಜನರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಬುದ್ಧಿವಂತ ಜನರು ಮುಂದಿನ ದಿನಗಳಲ್ಲಿ ಬಿಜೆಪಿಗೆ ಬುದ್ಧಿ ಕಲಿಸುತ್ತಾರೆ ಎಂದು ಹೇಳಿದರು.

Join Whatsapp
Exit mobile version