Home ಟಾಪ್ ಸುದ್ದಿಗಳು ವಯಸ್ಸಾದಾಗ ಜನ ಸಾಯಲೇಬೇಕು | ಕೊರೋನಾ ಸಾವಿನ ಕುರಿತು ಬಿಜೆಪಿ ಸಚಿವರ ವಿವಾದಾತ್ಮಕ ಹೇಳಿಕೆ

ವಯಸ್ಸಾದಾಗ ಜನ ಸಾಯಲೇಬೇಕು | ಕೊರೋನಾ ಸಾವಿನ ಕುರಿತು ಬಿಜೆಪಿ ಸಚಿವರ ವಿವಾದಾತ್ಮಕ ಹೇಳಿಕೆ

ಮಧ್ಯಪ್ರದೇಶ : ಕೊರೋನಾದಿಂದ ಉಂಟಾಗುವ ಸಾವನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ವಯಸ್ಸಾದಾಗ ಜನರು ಸಾಯಲೇಬೇಕು ಎಂದು ಮಧ್ಯಪ್ರದೇಶದ ಸಚಿವ ಪ್ರೇಮ್ ಸಿಂಗ್ ಪಟೇಲ್ ಅವರ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದೆ. ಜವಾಬ್ದಾರಿಯುತ್ ಸ್ಥಾನದಲ್ಲಿರುವ ಸಚಿವರೊಬ್ಬರ ಇಂತಹಾ ಬೇಜವಾಬ್ದಾರಿ ಹೇಳಿಕೆಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಕೊರೋನಾ ಸಾವಿನ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಈ ರೀತಿ ಉತ್ತರಿಸಿದ ಸಚಿವರು, ಪ್ರತಿದಿನ  ಬಹಳಷ್ಟು ಜನ ಸಾಯುತ್ತಿದ್ದಾರೆ ಎಂದು ನೀವು ಹೇಳುತ್ತೀರಿ, ವಯಸ್ಸಾದವರು ಸಾಯಲೇಬೇಕಲ್ಲ. ಕೊರೋನಾದಿಂದ ಸಾವು ಸಂಭವಿಸುತ್ತಿದೆ ಎಂದು ನಾನು ಒಪ್ಪುತ್ತೇನೆ. ಆದರೆ ಈ ಸಾವುಗಳನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.


ನಾನಷ್ಟೇ ಅಲ್ಲ, ದೇಶದ ಎಲ್ಲರೂ ಕೊರೋನಾದಿಂದ ರಕ್ಷಣೆಗಾಗಿ ಸಹಕರಿಸಲು ಮನವಿ ಮಾಡುತ್ತಿದ್ದಾರೆ. ನಾವು ಜನರ ಸಹಕಾರವನ್ನು ಬಯಸುತ್ತೇವೆ. ಮಾಸ್ಕ್ ಧರಿಸುವುದು ಸೇರಿದಂತೆ ಅಗತ್ಯವಿರುವ ಎಲ್ಲಾ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವುದು ಅವಶ್ಯಕ. ಕೈ ತೊಳೆಯುವುದು, ಸಾಮಾಜಿಕ ಅಂತರವನ್ನು ಪಾಲಿಸಿ ವೈದ್ಯರಿಂದ ಚಿಕಿತ್ಸೆ ಪಡೆಯಿರಿ ಎಂದು ಪ್ರೇಮ್ ಸಿಂಗ್ ಪಟೇಲ್ ಹೇಳಿದ್ದಾರೆ.



Join Whatsapp
Exit mobile version