Home ಟಾಪ್ ಸುದ್ದಿಗಳು 1 ರೂಪಾಯಿಯ ಬಿರಿಯಾನಿ ಆಫರ್: ಹೋಟೆಲ್ ಮುಂದೆ ಜಮಾಯಿಸಿದ ಜನ

1 ರೂಪಾಯಿಯ ಬಿರಿಯಾನಿ ಆಫರ್: ಹೋಟೆಲ್ ಮುಂದೆ ಜಮಾಯಿಸಿದ ಜನ

ತೆಲಂಗಾಣದ ಕರೀಂ ನಗರದಲ್ಲಿ ಹೊಸತಾಗಿ ಪ್ರಾರಂಭಗೊಂಡ ಹೋಟೇಲ್ ಒಂದರಲ್ಲಿ ‘1 ರೂಪಾಯಿಗೆ ಬಿರಿಯಾನಿ’ ನೀಡುತ್ತಿದ್ದು, ಬಿರಿಯಾನಿ ಖರೀದಿಸಲು ಜನಸಾಗರವೇ ಹರಿದುಬಂದಿದೆ.

ಕರೀಂನಗರದಲ್ಲಿ ರೆಸ್ಟೋರೆಂಟ್ ಮಾಲೀಕರೊಬ್ಬರು ಗ್ರಾಹಕರನ್ನು ಆಕರ್ಷಿಸಲು ವಿನೂತನ ಮಾರುಕಟ್ಟೆ ತಂತ್ರವನ್ನು ಬಳಸಿದ್ದಾರೆ. ಹೊಸ ರೆಸ್ಟೋರೆಂಟ್ ತೆರೆದಿರುವ ವ್ಯಕ್ತಿಯೊಬ್ಬರು ಆರಂಭಿಕ ಆಫರ್ ಅಡಿಯಲ್ಲಿ 1 ರೂಪಾಯಿಯ ನೋಟು ತಂದವರಿಗೆ ತಲಾ ಒಂದು ಬಿರಿಯಾನಿ ನೀಡಲಾಗುವುದು ಎಂದು ಎಲ್ಲೆಡೆ ಫ್ಲೆಕ್ಸ್ ಹಾಕಿ ಪ್ರಚಾರ ಮಾಡಿದ್ದಾರೆ.


ಸಾಮಾನ್ಯವಾಗಿ ಒಂದು ಪ್ಲೇಟ್ ಚಿಕನ್ ಬಿರಿಯಾನಿಗೆ 100 ರಿಂದ 200 ರೂ. ಗಳವೆರೆಗೂ ಬೆಲೆ ಇರುವಾಗ 1. ರೂಪಾಯಿಗೆ ಬಿರಿಯಾನಿ ಸಿಗುವುದೆಂದರೆ ಪಾಲಿಗೆ ಬಂದದ್ದೇ ಪಂಚಾಮೃತ ಎನ್ನುತ್ತಾ ಹೋಟೇಲ್ ಶುಭಾರಂಭದ ದಿನ ಅಂದರೆ ಜೂನ್ 17 ರ ಶನಿವಾರದಂದು 1 ರೂಪಾಯಿ ಬಿರಿಯಾನಿ ಖರೀದಿಸಲು ತಮಿಳುನಾಡಿನ ಕರೀಂ ನಗರದಲ್ಲಿ ಜನಸಾಗರವೇ ಹರಿದು ಬಂದಿದೆ. ಬಿರಿಯಾನಿ ಪ್ರಿಯರು ಮುಂಜಾನೆಯೆ ಹೋಟೆಲ್ ಮುಂದೆ ಜಮಾಸಿದ್ದು, ಗಂಟೆಗಳು ಕಳೆದಂತೆ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು. ಬಿರಿಯಾನಿ ಕೊಳ್ಳುವ ಆತುರದಲ್ಲಿ ನೋ ಪಾರ್ಕಿಂಗ್ ಜಾಗಗಳಲ್ಲಿ ವಾಹನ ನಿಲ್ಲಿಸಿ ಸುಗಮ ಸಂಚಾರ ಹಾಗೂ ಇತರ ಪ್ರಯಾಣಿಕರಿಗೆ ಅನಾನುಕೂಲತೆಯನ್ನು ಉಂಟುಮಾಡಿದವರ ಮೇಲೆ 200 ರಿಂದ 250 ರೂಪಾಯಿ ದಂಡವನ್ನು ಕೂಡಾ ವಿಧಿಸಿದ್ದಾರೆ.

Join Whatsapp
Exit mobile version