Home ಟಾಪ್ ಸುದ್ದಿಗಳು ರಾಜ್ಯಕ್ಕೆ ವಿರೋಧ ಪಕ್ಷದ ನಾಯಕನಿಲ್ಲ ಎಂಬುದನ್ನು ಜನತೆ, ಬಿಜೆಪಿ ಪಕ್ಷ ಮರೆತೇ ಹೋಗಿದೆ: ಕಾಂಗ್ರೆಸ್‌ ಕಳವಳ

ರಾಜ್ಯಕ್ಕೆ ವಿರೋಧ ಪಕ್ಷದ ನಾಯಕನಿಲ್ಲ ಎಂಬುದನ್ನು ಜನತೆ, ಬಿಜೆಪಿ ಪಕ್ಷ ಮರೆತೇ ಹೋಗಿದೆ: ಕಾಂಗ್ರೆಸ್‌ ಕಳವಳ

ಬೆಂಗಳೂರು: ಕರ್ನಾಟಕದಲ್ಲಿ ವಿರೋಧ ಪಕ್ಷದ ನಾಯಕನಿಲ್ಲ, ಇದು ಈ ರಾಜ್ಯಕ್ಕೆ ಮಾಡುವ ಅನ್ಯಾಯ. ಆದರೆ ಈ ಗಂಭೀರ ಸಂಗತಿಯನ್ನು ಜನತೆ ಹಾಗೂ ಬಿಜೆಪಿ ಪಕ್ಷ ಬಹುತೇಕ ಮರೆತೇ ಹೋಗಿದ್ದಾರೆ ಎಂದು ಕಾಂಗ್ರೆಸ್‌ ಹೇಳಿದೆ.

ಎಕ್ಸ್‌ ನಲ್ಲಿ ಪೋಸ್ಟರ್‌ ಒಂದನ್ನು ಹಂಚಿಕೊಂಡಿರುವ ಕಾಂಗ್ರೆಸ್, ಪ್ರಮುಖ ಸಾಂವಿಧಾನಿಕ ಹುದ್ದೆಯಾದ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನ ಖಾಲಿ ಇದೆ. ಕರ್ನಾಟಕದ ಜನತೆ ಮರೆತಿರುವ ಈ ಸಂಗತಿಯನ್ನು ಮತ್ತೆ ನೆನಪಿಸುತ್ತಿದ್ದೇವೆʼʼ ಎಂದು ಉಲ್ಲೇಖಿಸಿದೆ. ಪ್ರಮುಖ ಸಾಂವಿಧಾನಿಕ ಹುದ್ದೆಯೊಂದನ್ನು ಖಾಲಿ ಬಿಟ್ಟಿರುವ ಬಿಜೆಪಿ ಪ್ರಜಾತಂತ್ರ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ಅಪಚಾರ ಮಾಡುತ್ತಿದೆ ಎಂದು ಕಾಂಗ್ರೆಸ್‌ ಕಿಡಿಕಾರಿದೆ.

ಬಿಜೆಪಿಗೆ ಆಡಳಿತದಲ್ಲಿ ಮಾತ್ರ ಅಸಾಮರ್ಥ್ಯವಿರುವುದಲ್ಲ, ಆಂತರಿಕ ಕಲಹ ನಿಭಾಯಿಸುವುದರಲ್ಲಿಯೂ ಅಸಾಮರ್ಥ್ಯವಿದೆ. ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡುವುದರಲ್ಲೂ ಅಸಮರ್ಥವಾಗಿದೆ.. ವಿರೋಧ ಪಕ್ಷದ ನಾಯಕನ ಆಯ್ಕೆಗೆ ಬಿಜೆಪಿ ವರಿಷ್ಠರಿಗೆ ಸೂಕ್ತ ಸಮಯ ಬರಲಿಲ್ಲವೇ? ಕುಮಾರಸ್ವಾಮಿಯವರನ್ನು ಭೇಟಿ ಮಾಡಲು ಸಮಯವಿರುವ ಹೈಕಮಾಂಡಿಗೆ ಸ್ವಂತ ಪಕ್ಷದ ಸಮಸ್ಯೆ ಬಗೆಹರಿಸಲು ಸಮಯವಿಲ್ಲವೇ? ಅಥವಾ ಬಿಜೆಪಿಯಲ್ಲಿ ಆ ಹುದ್ದೆಗೆ ಯೋಗ್ಯತೆ, ಅರ್ಹತೆ ಇರುವ ವ್ಯಕ್ತಿ ಯಾರೂ ಇಲ್ಲವೇ? ಎಂದು ಕಾಂಗ್ರೆಸ್‌ ಪ್ರಶ್ನೆ ಮಾಡಿದೆ.



Join Whatsapp
Exit mobile version