Home ಕರಾವಳಿ ಪೆನ್ ಪಾಯಿಂಟ್ ಕಥಾ ಸ್ಪರ್ಧೆ: ನಿಶ್ಮಾ ಇರ್ಶಾದ್ ಪ್ರಥಮ, ಲುಕ್ಮಾನ್‌ ಅಡ್ಯಾರ್ ದ್ವಿತೀಯ

ಪೆನ್ ಪಾಯಿಂಟ್ ಕಥಾ ಸ್ಪರ್ಧೆ: ನಿಶ್ಮಾ ಇರ್ಶಾದ್ ಪ್ರಥಮ, ಲುಕ್ಮಾನ್‌ ಅಡ್ಯಾರ್ ದ್ವಿತೀಯ

ಮಂಗಳೂರು: ಪೆನ್‌ ಪಾಯಿಂಟ್ ಸ್ನೇಹ ವೇದಿಕೆ ಆಯೋಜಿಸಿದ್ದ ರಾಜ್ಯಮಟ್ಟದ ಕಥಾ ಸ್ಪರ್ಧೆಯಲ್ಲಿ ನಿಶ್ಮಾ ಇರ್ಶಾದ್ ಪ್ರಥಮ ಮತ್ತು ಲುಕ್ಮಾನ್ ಅಡ್ಯಾರ್ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಪೆನ್ ಪಾಯಿಂಟ್ ಸ್ನೇಹ ವೇದಿಕೆಯ ಐದನೇ ವಾರ್ಷಿಕೋತ್ಸವ ಅಂಗವಾಗಿ ರಾಜ್ಯಮಟ್ಟದ ಮುಕ್ತ ಕಥಾ ಸ್ಪರ್ಧೆ ಆಯೋಜಿಸಿತ್ತು. ಐವತ್ತಕ್ಕೂ ಮಿಕ್ಕ ಕತೆಗಳಲ್ಲಿ ಕನ್ನಡ ಒನ್ ಪ್ರಧಾನ ಸಂಪಾದಕಿ ನಿಶ್ಮಾ ಇರ್ಶಾದ್ ರವರ ‘ವೃದ್ಧಾಶ್ರಮ’ ಎಂಬ ಕಥೆ ಪ್ರಥಮ ಮತ್ತು ಪತ್ರಕರ್ತ ಲುಕ್ಮಾನ್ ಅಡ್ಯಾರ್ ರವರ ‘ಮೂನಾರಿನ ನೀಲಕುರಿಂಜಿ ಹೂಗಳು’ ಕಥೆ ದ್ವಿತೀಯ ಸ್ಥಾನಕ್ಕೆ ಆಯ್ಕೆಯಾಗಿದೆ.

ಅದೇ ರೀತಿ ಅವಿಜ್ಞಾನಿ(ನಿಝಾಂ) ಬರೆದ “ತುಕ್ರ ಮತ್ತು ಕೇಸರಿ ಬೈರಾಸು”
ಸಾರಾ ಅಲಿ ಪರ್ಲಡ್ಕ ರವರ “ಒತ್ತೆ ಇಟ್ಟ ಕಾಸಿನ ಡಾಬು” ,ಮರ್ಯಮ್ ಇಸ್ಮಾಯಿಲ್ ಉಳ್ಳಾಲ ರವರ “ವಿಶೇಷ ಗಿಫ್ಟ್”, ಸಲೀಮ್ ಅಬ್ಬಾಸ್ ವಲಾಲ್ ರವರ “ಪುತ್ತುಞಿಯ ಡಕೋಟ ಎಕ್ಸ್ ಪ್ರೆಸ್”, ಸಬೀಯ ರುಮೀಜ್ ಕುಶಾಲನಗರ ರವರ “ಎಲ್ಲಿರುವೆ” ಎಂಬ ಒಟ್ಟು 5 ಮಂದಿ ಕಥೆಗಾರರ ಕಥೆಗಳು ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಜೇತರಿಗೆ ನಗದು ಮತ್ತು ಸ್ಮರಣಿಕೆಯನ್ನು ಪೆನ್ ಪಾಯಿಂಟ್ ವೇದಿಕೆ ಘೋಷಿಸಿದ್ದು ಜವವರಿ 14 ರಂದು ಉಳ್ಳಾಲದಲ್ಲಿ ನಡೆಯುವ ಪೆನ್ ಪಾಯಿಂಟ್ ಸಮಾವೇಶದಲ್ಲಿ ಅದನ್ನು ನೀಡಲಾಗುವುದು.

Join Whatsapp
Exit mobile version