Home ಟಾಪ್ ಸುದ್ದಿಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲಿದ್ದ ಶಾಂತಿ ಈಗ ಇಲ್ಲ: ಪರಮೇಶ್ವರ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲಿದ್ದ ಶಾಂತಿ ಈಗ ಇಲ್ಲ: ಪರಮೇಶ್ವರ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲಿದ್ದ ಶಾಂತಿ ಈಗ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.


ಮಂಗಳೂರಿನಲ್ಲಿ ಮಾತನಾಡಿದ ಅವರು, ಜನರು ಶಾಂತಿಯಿಂದ ಬದುಕುವ ಕಡೆಗೆ ನಾವು ಗಮನ ಹರಿಸುತ್ತೇವೆ. ಧರ್ಮ ಹಾಗೂ ಜಾತಿಗಳ ಹೆಸರಿನಲ್ಲಿ ರಾಜಕಾರಣ ಆಗಬಾರದು ಎಂದರು.


ಈ ಭಾಗದಲ್ಲಿ ಮೊದಲಿದ್ದ ಶಾಂತಿ ಈಗ ಇಲ್ಲ. ಕಳೆದ ಚುನಾವಣೆ ಹೊತ್ತಲ್ಲಿ ನಾನು ನೂರು ಜನರನ್ನು ಸಂಪರ್ಕಿಸಿದ್ದೆ. ಮಂಗಳೂರು ಮೊದಲು ಶಾಂತಿಯಿಂದ ಇತ್ತು, ಈಗ ಇಲ್ಲ ಎಂದಿದ್ದರು. ಮಕ್ಕಳೆಲ್ಲರೂ ಈಗ ಊರು ಬಿಟ್ಟು ಬೇರೆ ಕಡೆ ಹೋಗಿದ್ದಾರೆ ಅಂತ ಹೇಳಿದ್ದಾರೆ. ಕಲುಷಿತ ವಾತಾವರಣದಿಂದ ಬೇರೆ ಕಡೆ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದಾರೆ. ಧರ್ಮ ನಂಬಿಕೆಗಳನ್ನು ಅನುಸರಿಸುವಾಗ ಶಾಂತಿಯಿಂದ ಇರಬೇಕು. ಇಡೀ ಸಮುದಾಯಕ್ಕೆ ವಿಷ ಬೀಜ ಬಿತ್ತುವ ಕೆಲಸ ಆಗಬಾರದು ಎಂದರು.

Join Whatsapp
Exit mobile version