PDF ಜನಕ ಚಾರ್ಲ್ಸ್ ಚುಕ್‌ಗೆಶ್ಕೆ ಇನ್ನಿಲ್ಲ

Prasthutha: April 19, 2021

 ಪಿಡಿಎಫ್​, ಫೋಟೋಷಾಪ್​ ಸೇರಿದಂತೆ ಹಲವು ಸಾಫ್ಟ್​ವೇರ್​ಗಳನ್ನು ಅಭಿವೃದ್ಧಿಪಡಿಸಿರುವ ಚಾರ್ಲ್ಸ್ ಚುಕ್‌ಗೆಶ್ಕೆ (81) ನಿಧನರಾಗಿದ್ದಾರೆ.

ವಿಶ್ವಪ್ರಸಿದ್ಧ ಅಡೋಬ್‌ ಕಂಪೆನಿಯ ಸಹಸಂಸ್ಥಾಪಕರಾದ ಚಾರ್ಲ್ಸ್, ಬರಹ ಅಥವಾ ಚಿತ್ರವನ್ನು ಪೋರ್ಟೆಬಲ್‌ ಡಾಕ್ಯುಮೆಂಟ್‌ ಫಾರ್ಮೆಟ್​ಗೆ (ಪಿಡಿಎಫ್‌)ಪರಿವರ್ತಿಸುವ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಿ ಸಂವಹನ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿದ್ದಾರೆ.

ಪಿಡಿಎಫ್‌ ಸಾಫ್ಟ್‌ವೇರ್‌ ಬಂದ ಬಳಿಕ ಬರಹ ಹಾಗೂ ಚಿತ್ರಗಳನ್ನು ಪೇಪರ್‌ ಮೇಲೆ ಪ್ರಿಂಟ್‌ ಮಾಡುವುದು ಅತ್ಯಂತ ಸುಲಭವಾಗಿತ್ತು.  ಈ ಮೂಲಕ ಪಿಡಿಎಫ್‌ ಸಂವಹನ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣವಾಯಿತು. ಚಾರ್ಲ್ಸ್ ಅಡೋಬ್ ಸಾಫ್ಟ್‌ವೇರ್‌ ಪಿಡಿಎಫ್‌, ಅಕ್ರೋಬಾಟ್‌, ಇಲ್ಯುಸ್ಪ್ರೇಟರ್‌, ಪ್ರೀಮಿಯರ್‌ ಪ್ರೋ ಮತ್ತು ಫೋಟೊಶಾಪ್​ನಂತಹ ಜನಪ್ರಿಯ ಅಪ್ಲಿಕೇಶನ್‌ಗಳನ್ನು ಕೂಡ ಕಂಡುಹಿಡಿದಿದ್ದಾರೆ.

ಕಂಪ್ಯೂಟರ್ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಚುಕ್‌ಗೆಶ್ಕೆ 1982ರಲ್ಲಿ ವರ್ನಾಕ್‌ ಅಡೋಬ್‌ ಸಾಫ್ಟ್‌ವೇರ್‌ ಕಂಪನಿಯನ್ನು ಸ್ಥಾಪಿಸಿದ್ದರು. 1990ರ ದಶಕದಲ್ಲಿ ಪಿಡಿಎಫ್‌ ಫಾರ್ಮೆಟ್‌ ಅಭಿವೃದ್ಧಿಪಡಿಸಿದ್ದರು. ಅವರ ನಿಧನ ಸಂಸ್ಥೆಗೆ ತುಂಬಲಾರದ ನಷ್ಟ ಎಂದು ಅಡೋಬ್‌ ಸಿಇಒ ಶಂತನು ನಾರಾಯಣ್‌ ಸಂತಾಪ ವ್ಯಕ್ತಪಡಿಸಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!