Home ಗಲ್ಫ್ ಸೌದಿ ಅರೇಬಿಯಾದಲ್ಲಿ ಉದ್ಯೋಗ ವೀಸಾದ ಸ್ಟ್ಯಾಂಪಿಂಗ್’ಗೆ ಇನ್ನು ಮುಂದಕ್ಕೆ PCC ಕಡ್ಡಾಯವಲ್ಲ

ಸೌದಿ ಅರೇಬಿಯಾದಲ್ಲಿ ಉದ್ಯೋಗ ವೀಸಾದ ಸ್ಟ್ಯಾಂಪಿಂಗ್’ಗೆ ಇನ್ನು ಮುಂದಕ್ಕೆ PCC ಕಡ್ಡಾಯವಲ್ಲ

ನವದೆಹಲಿ: ಸೌದಿ ಅರೇಬಿಯಾದ ಉದ್ಯೋಗ ವೀಸಾ ಸ್ಟ್ಯಾಂಪಿಂಗ್’ಗೆ PCC ಕಡ್ಡಾಯ ಎಂಬ ಸೌದಿ ಸರ್ಕಾರದ ಹೊಸ ನಿಯಮಾವಳಿಯನ್ನು ರದ್ದುಗೊಳಿಸಲಾಗಿದೆ ಎಂದು ನವದೆಹಲಿಯಲ್ಲಿರುವ ಸೌದಿ ಕಾನ್ಸುಲೇಟ್ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ.

ಉದ್ಯೋಗ ವೀಸಾ ಸ್ಟ್ಯಾಂಪಿಂಗ್ ಅನ್ನು ಪೂರ್ತಿಗೊಳಿಸಲು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರ (PCC) ಇನ್ನು ಮುಂದಕ್ಕೆ ಕಡ್ದಾಯವಲ್ಲ. ನವದೆಹಲಿಯ ಸೌದಿ ಕಾನ್ಸೆಲೇಟ್ ಈ ಬಗ್ಗೆ ಎಲ್ಲಾ ನೇಮಕಾತಿ ಏಜೆಂಟರಿಗೆ ಮತ್ತು ಅಧಿಕೃತ ಟ್ರಾವೆಲ್ ಏಜೆನ್ಸಿಗಳಿಗೆ ಅಧಿಸೂಚನೆ ಹೊರಡಿಸಿದೆ.

ಇದರಿಂದ ಸೌದಿಗೆ ತೆರಳುವ ಭಾರತೀಯರಿಗೆ ಅನುಕೂಲವಾಗಲಿದೆ.

ಸೌದಿಯಲ್ಲಿ ನೆಲೆಸಿರುವ ಎರಡು ದಶಲಕ್ಷಕ್ಕೂ ಹೆಚ್ಚು ಭಾರತೀಯ ನಾಗರಿಕರ ಕೊಡುಗೆಯನ್ನು ಸರ್ಕಾರ ಶ್ಲಾಘಿಸುತ್ತದೆ” ಎಂದು ಸೌದಿ ರಾಯಭಾರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

Join Whatsapp
Exit mobile version