Home ಕ್ರೀಡೆ ಟೋಕಿಯೋ ಒಲಿಂಪಿಕ್ಸ್: ಪಿ.ವಿ. ಸಿಂಧು ಪ್ರಿ-ಕ್ವಾರ್ಟರ್ ಪ್ರವೇಶ

ಟೋಕಿಯೋ ಒಲಿಂಪಿಕ್ಸ್: ಪಿ.ವಿ. ಸಿಂಧು ಪ್ರಿ-ಕ್ವಾರ್ಟರ್ ಪ್ರವೇಶ

ಟೋಕಿಯೊ: 2016 ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಮಿಂಚಿನ ಆಟ ಮುಂದುವರಿಸಿದ್ದು, ಪ್ರತಿಷ್ಠಿತ ಟೋಕಿಯೊ ಒಲಿಂಪಿಕ್ಸ್ನಲ್ಲಿ ಪ್ರಿ-ಕ್ವಾರ್ಟರ್ಫೈನಲ್ಗೆ ಪ್ರವೇಶಿಸಿದ್ದಾರೆ. ಬುಧವಾರ ನಡೆದ ಮಹಿಳಾ ಸಿಂಗಲ್ಸ್ ‘ಜೆ’ ಗುಂಪಿನ ಪಂದ್ಯದಲ್ಲಿ ವಿಶ್ವ ನಂ.7 ರ್ಯಾಂ ಕ್ನ ಸಿಂಧು, ಹಾಂಕಾಂಗ್ನ ಎನ್ವೈ ಚೆಯುಂಗ್ ವಿರುದ್ಧ 21-9 21-16ರಿಂದ ಗೆಲುವಿನ ನಗೆ ಬೀರಿದರು.

ಭರವಸೆಯ ತಾರೆಯಾಗಿರುವ ಸಿಂಧು ಅಮೋಘ ಆಟವಾಡುವ ಮೂಲಕ ಎದುರಾಳಿಯ ಮೇಲೆ ಪಾರಮ್ಯ ಮೆರೆದರು. ಅಲ್ಲದೆ ವಿಶ್ವ ನಂ. 34ನೇ ರ್ಯಾಂ ಕ್ನ ಚೆಯುಂಗ್ ವಿರುದ್ಧದ ಪಂದ್ಯವನ್ನು 35 ನಿಮಿಷದಲ್ಲೇ ವಶಪಡಿಸಿಕೊಂಡರು.

26 ವರ್ಷದ ಸಿಂಧು, ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಡೆನ್ಮಾರ್ಕ್ ನ ವಿಶ್ವ ನಂ.12ನೇ ರ್ಯಾಂ ಕ್ ನ ಮಿಯಾ ಬ್ಲೆಚ್ ಫೆಲ್ಡ್ ಸವಾಲನ್ನು ಎದುರಿಸಲಿದ್ದಾರೆ. ಆಕೆಯ ವಿರುದ್ಧ ಈ ಹಿಂದಿನ ಪಂದ್ಯಗಳಲ್ಲಿ ಸಿಂಧು 4-1 ಅಂತರದ ಗೆಲುವು-ಸೋಲಿನ ಅಂತರವನ್ನು ಕಾಪಾಡಿಕೊಂಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್ನಲ್ಲಿ ಆರನೇ ಶ್ರೇಯಾಂಕಿತೆ ಸಿಂಧು ಅವರು ಮೊದಲ ಪಂದ್ಯದಲ್ಲಿ ಇಸ್ರೇಲ್ನ ಸೆನಿಯಾ ಪೊಲಿಕರ್ಪೊವಾ ವಿರುದ್ಧ ಜಯಭೇರಿ ಮೊಳಗಿಸಿದ್ದರು.

Join Whatsapp
Exit mobile version